ಕಾರವಾರ: ಐಷಾರಾಮಿ ವಾಹನದಲ್ಲಿ ಗೋವುಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಗೋಕಳ್ಳರನ್ನು ಶಿರಸಿ ಪೊಲೀಸರು ಬಂಧಿಸಿದ ಘಟನೆ ಕೋಟೆಕೆರೆ ಬಳಿ ನಡೆದಿದೆ.ಶಿವಮೊಗ್ಗದ ಮತ್ತೂರು ರಸ್ತೆಯ ಈದ್ಗಾನಗರದ ಅಬ್ದುಲ್ ಅಜೀಜ್, ತಂದೆ ಅಬ್ದುಲ್ ಗಫಾರ (29) ಹಾಗೂ ದಕ್ಷಿಣ ಕನ್ನಡ ಬಜಪೆಯ ಕೊಳಂಜೆ, ಕೊಂಚೂರಿನ ಫೈಜಲ್ ಅಬ್ದುಲ್ ರಜಾಕ್ (36) ಬಂಧಿತ ಆರೋಪಿಗಳು. ಬಂಧನದ ಸಮಯದಲ್ಲಿ ಶಿವಮೊಗ್ಗದ ಇಮ್ರಾನ್, ಅಯಾಸ್ ಹಾಗೂ ರೆಹೆಮಾನ್ ಮೂವರು ಪರಾರಿಯಾಗಿದ್ದು, ಹುಡುಕಾಟ ನಡೆದಿದೆ.ಕೋಟೆಕೆರೆ ಜಂಕ್ಷನ್ ಬಳಿ ಪೊಲೀಸರು ನಾಕಾಬಂದಿ ಮಾಡಿ ವಾಹನಗಳನ್ನು ಚಕ್ ಮಾಡುತ್ತಿರುವಾಗ ಫಾರ್ಚುನರ್ ಹಾಗೂ ಕ್ರೇಟಾ ಕಾರನ್ನು ತಡೆದು ನಿಲ್ಲಿಸಿದಾಗ ಫಾರ್ಚುನರ್ ಕಾರಿನಲ್ಲಿದ್ದ ಮೂವರು ವಾಹವನ್ನು ಬಿಟ್ಟು ಓಡಿ ಹೊಗಿದ್ದು, ಕ್ರೇಟಾ ಕಾರಿನಲ್ಲಿದ್ದ ಇಬ್ಬರು ಓಡಲು ಪ್ರಯತ್ನಿಸಿದಾಗ ಪೊಲೀಸರು ಹಿಡಿದು ವಿಚಾರಿಸಿದ್ದಾರೆ. ಆರೋಪಿಗಳು ಶಿರಸಿಗೆ ದನಗಳ್ಳತನ ಮಾಡಲು ಬಂದಿದ್ದೇವೆ, ಈ ಹಿಂದೆ ಸಹ ಶಿರಸಿಯಲ್ಲಿ ದನಗಳ್ಳತನ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


