ವಿಜಯಪುರ: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾರೀ ಮಳೆಯಿಂದ ವಿಜಯಪುರದಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.ಜಿಲ್ಲೆಯ ಆಲಮಟ್ಟಿ ಲಾಲಬಾಹ್ದೂರ ಶಾಸ್ತ್ರಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, 4 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ಒಳಹರಿವು ಮತ್ತು ಹೊರಹರಿವು ಇದ್ದು, ಜಿಲ್ಲೆಯ ಮುದ್ದೇಬಿಹಾಳ, ನಿಡಗುಂದಿ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.ಮುದ್ದೇಬಿಹಾಳ ತಾಲೂಕಿನ ಕಮ್ಮಲದಿನ್ನಿ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಕಮ್ಮಲದಿನ್ನಿ-ಗಂಗೂರ ರಸ್ತೆ ಜಲಾವೃತವಾಗಿದೆ. ಇದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ಜಲಾವೃತವಾದ ರಸ್ತೆ ಮೇಲೆಯೇ ಅಪಾಯದಲ್ಲಿ ಜನರು ಸಂಚಾರ ಮಾಡುತ್ತಿದ್ದಾರೆ. ಕಮ್ಮಲದಿನ್ನಿ ಗ್ರಾಮವನ್ನು ಕೃಷ್ಣಾ ನದಿಯ ನೀರು ಸುತ್ತುವರಿದಿದೆ.Sign in to your account
Username or Email Address


Password

 Remember Me


