ಬೆಂಗಳೂರು: ಚಂದನವನದ ರಾಕಿಂಗ್ ಜೋಡಿ ಅಂದ್ರೆ ಅದು ಯಶ್ ಮತ್ತು ರಾಧಿಕಾ ಪಂಡಿತ್. ಈ ಜೋಡಿಯ ಕ್ಯೂಟ್ ಆ್ಯಂಡ್ ಬಬ್ಲಿ ಮಗಳು ಐರಾ ಸಂದೇಶ ನೀಡಿದ್ದಾಳೆ. ಈ ಕುರಿತು ಸ್ಯಾಂಡಲ್‍ವುಡ್ ಸಿಂಡ್ರೆಲಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನ ಶೇರ್ ಮಾಡ್ಕೊಂಡಿದ್ದಾರೆ.ಮಗಳು ಐರಾ ಜೊತೆಗಿನ ಸೆಲ್ಫಿ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಫೋಟೋಗೆ ಹಾಯ್, ನಿಮೆಗಲ್ಲರಿಗೂ ಹೆಲೋ ಹೇಳಲು ಬಂದೆ ಅಂತ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇನ್ನೂ ಫೋಟೋ ಪೋಸ್ಟ್ ಆಗ್ತಿದ್ದಂತೆ ರಾಕಿಂಗ್ ಫ್ಯಾನ್ಸ್ ಲೈಕ್ಸ್ ನೀಡುವದರ ಜೊತೆಗೆ ಹಾರ್ಟ್ ಎಮೋಜಿ ಹಾಕಿ ಕಮೆಂಟ್ ಮಾಡುತ್ತಿದ್ದಾರೆ.ಎರಡು ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಸಿನಿಮಾದಿಂದ ದೂರವಾಗಿದ್ದಾರೆ. ಸಿನಿಮಾದಿಂದ ದೂರವಾದ್ರೂ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್ ಗೆ ಹತ್ತಿರವಾಗಿದ್ದಾರೆ. ಸಮಯ ಸಿಕ್ಕಾಗಲ್ಲೇ ಮುದ್ದು ಮಕ್ಕಳ ಫೋಟೋ, ಅವರ ತುಂಟಾಟದ ವೀಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಸಹ ಅಷ್ಟೇ ಅಭಿಮಾನದಿಂದ ಎಲ್ಲ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ತಂದೆಯ ಭಜನೆ ಹಾಡಿಗೆ ಮನಸೋತ ರಾಧಿಕಾ ಪಂಡಿತ್ಕೆಲ ದಿನಗಳ ಹಿಂದೆ ಮಗಳು ಬಾಸ್ಕೆಟ್ ನಲ್ಲಿ ಕುಳಿತಿದ್ದ ಫೋಟೋ, ಮಗನಿಗೆ ಉಗುರು ಕಟ್ ಮಾಡುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಬಿಡುಗಡೆಗಾಗಿ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ. ಲಹರಿ ಮ್ಯೂಸಿಕ್ ಕೆಜಿಎಫ್-2 ಚಿತ್ರ ಆಡಿಯೋ ಹಕ್ಕುಗಳನ್ನು ಸುಮಾರು ಏಳು ಕೋಟಿಗೂ ಅಧಿಕ ಬೆಲೆ ನೀಡಿ ಖರೀದಿಸಿದೆ.  ಇದನ್ನೂ ಓದಿ: ಆಡಿಯೋ ಹಕ್ಕು ಮಾರಾಟದಲ್ಲಿ ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್-2  A post shared by Radhika Pandit (@iamradhikapandit)Sign in to your account
Username or Email Address


Password

 Remember Me


