ಹಾಸನ: ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.ಯುವ ಮುಖಂಡ ಮುಖ್ಯಮಂತ್ರಿ ಆಗಿರುವುದು ಸಂತೋಷ. ಅವರು ಭ್ರಷ್ಟಾಚಾರ ತೆಗೆಯೋದು ನಮ್ಮಗುರಿ ಅಂದಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ನೂತನ ಮುಖ್ಯಮಂತ್ರಿಗೆ ರೇವಣ್ಣ ಸಲಹೆ ನೀಡಿದ್ದಾರೆ.ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿ ಕೃಷಿ ಯಂತ್ರಧಾರೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯನದವರೊಂದಿಗೆ ಮಾತನಾಡಿದ ಅವರು, ಹಿಂದಿನ ಎರಡು ವರ್ಷ ಸುಲಿಗೆ ನಡೆಯುತ್ತಿತ್ತು. ಈಗಿನ ಮುಖ್ಯಮಂತ್ರಿ ಒಳ್ಳೆ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲಿ. ಹಾಸನ ಜಿಲ್ಲೆಯ ಕೆಲಸ ತಡೆ ಹಿಡಿದದ್ದಾಗಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ರೈತಪರ, ಒಳ್ಳೆಯ ಕೆಲಸ ಮಾಡಲಿ. ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಗಳಾಗಿರುವುದು. ಆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದು ರೇವಣ್ಣ ಶುಭ ಹಾರೈಸಿದ್ದಾರೆ.ಇದೇ ವೇಳೆ, ನಾನು ಸಂತೋಷ್ ಅವರ ಮನೆಗಾಗಲಿ, ಪ್ರಹ್ಲಾದ್ ಜೋಶಿ ಅವರ ಮನೆಗಾಗಲಿ ಹೋಗಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹಿಂದೆ ಗಡ್ಕರಿ ಅವರೇ ಬಂದು ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದರು. ಹೀಗಾಗಿ ಆ ಬಗ್ಗೆ ಮಾತಾಡಲು ದೆಹಲಿಗೆ ಹೋಗಿದ್ದೆ. ನಾನು ಯಾವುದೇ ರಾಜಕೀಯ ಕಾರಣಕ್ಕೆ ದೆಹಲಿಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ನಿರ್ಧಾರಕ್ಕೆ ಬದ್ಧ: ಮಾಜಿ ಸಚಿವ ನಿರಾಣಿ






 Advertisement 




Sign in to your account
Username or Email Address


Password

 Remember Me


