ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಸಿಎಂ ಆಗುತ್ತಿದ್ದಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬೊಮ್ಮಾಯಿಯವರಿಗೆ ತುಂಬಾ ಆತ್ಮೀಯತೆಯಿಂದ ವಿಶ್ ಮಾಡಿದ್ದಾರೆ.ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ಪ್ರಧಾನಿ ಮೋದಿ ಸಹಿತ ಹಲವು ಗಣ್ಯರು ಶುಭಕೋರಿದ್ದರು, ಅದರಂತೆ ಕಿಚ್ಚ ಕೂಡ ಬೊಮ್ಮಾಯಿಯವರಿಗೆ ಟ್ವಿಟ್ಟರ್‍ ನಲ್ಲಿ ಬಹಳ ಆತ್ಮೀಯ ಭಾವದಿಂದ ಶುಭಾಕೋರಿರುವುದು ಕಂಡುಬಂತು. ಅವರ ಸರಳತೆಯನ್ನು ನೋಡಿ ಬೆಳೆದವನು ನಾನು. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ನನಗೆ ತುಂಬಾ ಪ್ರೋತ್ಸಾಹ ನೀಡಿದ್ದರು. ನಿಮಗೆ ಶುಭವನ್ನು ಕೋರುತ್ತೇನೆ ಮಾಮ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಕ್ಷಯ್ ಕುಮಾರ್ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಗೆ ಭೂಮಿ ಪೂಜೆHave grown up seeing his simplicity. He has been a great support to me personally in the initial days of my career. Wishing you the best mama.@CMofKarnataka#Basavrajbommai pic.twitter.com/N1Wvrt0vk2— Kichcha Sudeepa (@KicchaSudeep) July 28, 2021ಈ ಟ್ವೀಟ್ ನೋಡುತ್ತಿದ್ದಂತೆ ಕಿಚ್ಚ ಹಾಗೂ ಬೊಮ್ಮಾಯಿಯವರು ತುಂಬಾ ಆತ್ಮೀಯರಾಗಿದ್ದಾರೆ ಎಂದು ತಿಳಿಯುತ್ತಿದೆ. ಸುದೀಪ್ ಸದ್ಯ ‘ಕೋಟಿಗೊಬ್ಬ-3’ ಮತ್ತು ‘ವಿಕ್ರಾಂತ್ ರೋಣ’ ಚಿತ್ರಗಳಲ್ಲಿ ಬ್ಯುಸಿ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರತಂಡ ಸಿಹಿ ಸುದ್ದಿ ನೀಡುವ ನಿರೀಕ್ಷೆ ಇದೆ.






 Advertisement 




Sign in to your account
Username or Email Address


Password

 Remember Me


