ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಲಾಕ್‍ಡೌನ್ ಸಡಿಲಿಕೆ ನಂತರ ಕಳೆದ ಒಂದು ವಾರದಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿಕೆಯಾಗ್ತಿದೆ. ರಾಜ್ಯದಲ್ಲಿಂದು 1,501 ಕೊರೊನಾ ಪ್ರಕರಣ ದಾಖಲಾಗಿದ್ದು, ಮಹಾಮಾರಿಗೆ 32 ಜನ ಬಲಿಯಾಗಿದ್ದಾರೆ.ರಾಜಧಾನಿ ಬೆಂಗಳೂರಿನಲ್ಲಿಂದು 354 ಜನಕ್ಕೆ ಸೋಂಕು ತಗುಲಿದ್ದು, ಐವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 2,039 ಜನರು ಡಿಸ್ಚಾರ್ಜ್ ಆಗಿದ್ದು, ಸದ್ಯ 22,487 ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 1,02,494 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ.1.46ಕ್ಕೆ ಇಳಿಕೆಯಾಗಿದೆ. ಇತ್ತ ಮರಣ ಪ್ರಮಾಣ ಶೇ.2.13ರಷ್ಟಿದೆ. ಇದುವರೆಗೂ ರಾಜ್ಯದಲ್ಲಿ 28,97,664 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 36,437 ಜನ ಸಾವನ್ನಪ್ಪಿದ್ದಾರೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 4, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 354, ಬೀದರ್ 0, ಚಾಮರಾಜನಗರ 31, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 62, ಚಿತ್ರದುರ್ಗ 8, ದಕ್ಷಿಣ ಕನ್ನಡ 247, ದಾವಣಗೆರೆ 24, ಧಾರವಾಡ 11, ಗದಗ 5, ಹಾಸನ 98, ಹಾವೇರಿ 7, ಕಲಬುರಗಿ 13, ಕೊಡಗು 46, ಕೋಲಾರ 41, ಕೊಪ್ಪಳ 15, ಮಂಡ್ಯ 55, ಮೈಸೂರು 108, ರಾಯಚೂರು 2, ರಾಮನಗರ 4, ಶಿವಮೊಗ್ಗ 71, ತುಮಕೂರು 47, ಉಡುಪಿ 98, ಉತ್ತರ ಕನ್ನಡ 40, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: 75 ವರ್ಷ, 75 ಗ್ರಾಮ, 75 ಗಂಟೆ – ಆಗಸ್ಟ್ 15ಕ್ಕೆ ಸಂಸದರಿಗೆ ಮೋದಿ ಟಾಸ್ಕ್Sign in to your account
Username or Email Address


Password

 Remember Me


