ಬೆಂಗಳೂರು: ಸಿಎಂ ಸ್ಥಾನಕ್ಕೆ ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವ ಸಂಕಲ್ಪವನ್ನ ಹಂಗಾಮಿ ಸಿಎಂ ಯಡಿಯೂರಪ್ಪ ಮಾಡಿದ್ದರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರಾದ ಬಿ.ವೈ.ರಾಘವೇಂದ್ರ, ನಾನು ಕುಟುಂಬ ಅನ್ನೋದಕ್ಕಿಂತ ಸಂಘಟನೆಯಿಂದ ಇಂದು ಸಂಸದನಾಗಿದ್ದೇನೆ. ವಿಜಯೇಂದ್ರ ಸಂಘಟನೆ ಮತ್ತು ಪಕ್ಷದ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾವಿರಾರು ಕಾರ್ಯಕರ್ತರನ್ನು ಯಡಿಯೂರಪ್ಪನವರು ಬೆಳೆಸಿದ್ದಾರೆ. ನಗರಕ್ಕೆ ಸೀಮಿತವಾದ ಪಕ್ಷ ಎಂಬ ಕಪ್ಪು ಚುಕ್ಕೆ ಮೊದಲು ನಮ್ಮ ಮೇಲೆ ಇತ್ತು. ಈಗ ಗ್ರಾಮಾಂತರ ಭಾಗದಲ್ಲಿಯೂ ಪಕ್ಷ ಬಲವರ್ಧನೆ ಮಾಡುವಲ್ಲಿ ಯಡಿಯೂರಪ್ಪನವರು ಕೆಲಸ ಮಾಡಿದ್ದಾರೆ. ಕುಟುಂಬ ಮತ್ತು ಮಕ್ಕಳಿಗಾಗಿ ಯಡಿಯೂರಪ್ಪ ಕಂಡೀಷನ್ ಹಾಕಿರುವ ಪ್ರಶ್ನೆಯೇ ಇಲ್ಲ ಅದೆಲ್ಲಾ ಸುಳ್ಳು ಎಂದರು. ಇದನ್ನೂ ಓದಿ: ಒತ್ತಡದ ತಂತ್ರ ಬಿಜೆಪಿಯಲ್ಲಿ ನಡೆಯಲ್ಲ: ಮುರುಗೇಶ್ ನಿರಾಣಿಸಿಎಂ ಆಯ್ಕೆಯಲ್ಲಿ ಹೈಕಮಾಂಡ್ ಯಾವ ನಿರ್ಧಾರ ಬೇಕಾದ್ರೂ ತೆಗೆದುಕೊಳ್ಳಬಹುದು. ಮಹಾರಾಷ್ಟ್ರ, ಯುಪಿ ಮಾದರಿಯಲ್ಲಿ ರಾಜ್ಯದಲ್ಲಿ ಅಚ್ಚರಿ ಆಗಬಹುದು. ಫಡ್ನವಿಸ್, ಯೋಗಿ ಅದಿತ್ಯನಾಥ್ ಆದ ರೀತಿಯಲ್ಲಿ ರಾಜ್ಯದಲ್ಲೂ ಆಗಬಹುದು. ಕೇಂದ್ರ ಸಚಿವ ಸಂಪುಟ ವಿಸ್ತರಣೆಯೂ ಆಗಿದ್ದು, ಅದೇ ರೀತಿ ನಮ್ಮ ಕಣ್ಣು ಮುಂದೆ ಇದೆ. 2 ತಿಂಗಳ ಹಿಂದೆಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋ ಸಂಕಲ್ಪ ಹೊಂದಿದ್ದರು. ಅದರಂತೆ ನಿನ್ನೆ ರಾಜೀನಾಮೆ ನೀಡಿದ್ರು. ಮುಂಬರುವ ಸಚಿವ ಸಂಪುಟದಲ್ಲಿ ಯಡಿಯೂರಪ್ಪ ಅವರ ಪಾತ್ರ ಇರಲ್ಲ. ಇನ್ನೂ ಮಕ್ಕಳ ಪಾತ್ರ ಎಲ್ಲಿಂದ ಬಂತು..? ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಾಗಿ ಸರ್ಕಾರ, ಪಕ್ಷದ ಸೇತುವೆಯಾಗಿ ಕೆಲಸ ಮಾಡಲಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಅಭಿಮಾನಿ ರವಿ ಆತ್ಮಹತ್ಯೆ ಸುದ್ದಿ ದಿಗ್ಭ್ರಮೆ ತರಿಸಿದೆ – ವಿಜಯೇಂದ್ರSign in to your account
Username or Email Address


Password

 Remember Me


