ಧಾರವಾಡ: ಸಿಎಂ ಬದಲಾವಣೆ ಮಾತ್ರವಲ್ಲ, ಸಂಪೂರ್ಣ ಸರ್ಕಾರವೇ ವಿಸರ್ಜನೆಯಾಗಬೇಕಿತ್ತು. ಮತ್ತೆ ಚುನಾವಣೆ ಆಗಬೇಕು ಎಂದು ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.ಧಾರವಾಡದಲ್ಲಿ ಮಾತನಾಡಿದ ಅವರು, ಇಷ್ಟು ದಿನ ಭ್ರಷ್ಟಾಚಾರದಿಂದ ಆಡಳಿತ ನಡೆದಿತ್ತು. ಮತ್ತೆ ಭ್ರಷ್ಟ ಸಿಎಂ ಬರುವುದರಿಂದ ಜನರಿಗೆ ಲಾಭ ಇಲ್ಲ ಎಂದ ಅವರು, ಜನರು ಇವರ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದರು.ಸಿದ್ದರಾಮಯ್ಯ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಹೋಲಿಕೆ ಮಾಡಿ ಜನ ನೋಡುತ್ತಿದ್ದಾರೆ. ಮತ್ತೆ ಸಿದ್ದರಾಮಯ್ಯ ಸರ್ಕಾರ ಬರಬೇಕು ಅಂತಾ ಜನ ಬಯಸಿದ್ದಾರೆ. ಮುಂದಿನ ಸಿಎಂ ಯಾರಾಗುತ್ತಾರೆ ಎಂದು ನಾನು ಹೇಗೆ ಹೇಳಲಿ, ಯಾರು ಸಿಎಂ ಆದರೆನು, ಸಂಪೂರ್ಣ ಬಿಜೆಪಿನೇ ಬೇಡ ಎನ್ನುವ ಸ್ಥಿತಿ ಇದೆ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರುSign in to your account
Username or Email Address


Password

 Remember Me


