ಮಂಡ್ಯ: ಜೆಡಿಎಸ್ ಶಾಸಕರು ಇಂದು ಕೆಆರ್‌ಎಸ್‌ನಲ್ಲಿ ದೃಷ್ಟಿ ಪೂಜೆಯನ್ನು ಆಯೋಜಿಸಿದ್ದಾರೆಡ್ಯಾಂ ಬಿರುಕು ವಿಚಾರವಾಗಿ ನಡೆಯುತ್ತಿರುವ ಆರೋಪ, ಪ್ರತ್ಯಾರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಇಂದು ಕೆಆರ್‍ಎಸ್ ಡ್ಯಾಂನ ಕಾವೇರಿ ಪ್ರತಿಮೆ ಬಳಿ ದೃಷ್ಟಿ ನಿವಾರಣೆ ಪೂಜೆ ಹಮ್ಮಿಕೊಂಡಿದ್ದಾರೆ.ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಈ ಪೂಜೆ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಹೋಮ, ಹವನಗಳ ಮೂಲಕ ಡ್ಯಾಂಗೆ ತಾಗಿರುವ ದೃಷ್ಟಿ ನಿವಾರಣೆ ಮಾಡಲು ಜೆಡಿಎಸ್ ಶಾಸಕರು ಮುಂದಾಗಿದ್ದಾರೆ.ಈ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಡ್ಯಾಂಗೆ ದೃಷ್ಟಿ ತಾಗಿದೆ ಎಂದಿದ್ದರು. ಸಂಸದೆ ಸುಮಲತಾ ಅವರು ಇತ್ತೀಚೆಗೆ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಕೆಆರ್‌ಎಸ್‌ನಲ್ಲಿ ಮೆಟ್ಟಿಲುಗಳ ಗೋಡೆ ಕುಸಿತವಾಗಿತ್ತು. ಇದನ್ನೂ ಓದಿ : ಇಂದು ಕ್ಲೈಮ್ಯಾಕ್ಸ್ – ಸಿಎಂ ಬಿಎಸ್‍ವೈ ಕಾರ್ಯಕ್ರಮಗಳು ಏನು?






 Advertisement 




Sign in to your account
Username or Email Address


Password

 Remember Me


