ಮಂಗಳೂರು: ಮಹಿಳೆ ಮತ್ತು ಮಗುವಿದ್ದ ಕಾರಿನ ಟಯರ್ ಪಂಕ್ಚರ್ ಆಗಿದ್ದು, ಇದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ಬೇರೆ ಟಯರ್ ಅಳವಡಿಸಿ ಮಾನವೀಯತೆ ಮೆರೆದರು.ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪಂಪ್ ವೆಲ್ ಬಳಿ ಟಯರ್ ಪಂಕ್ಚರ್ ಆಗಿತ್ತು. ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟಯರನ್ನು ಬದಲಿಸಿ ಮಾನವೀಯತೆ ಮೆರೆದಿದ್ದಾರೆ.ಈ ಸಂದರ್ಭ ನಾಗುರಿ ಸಂಚಾರಿ ಠಾಣೆ ಎಎಸ್ ಐ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾರ್ಡ್ ಆಸೀಫ್ ಇದ್ದರು. ಇದನ್ನೂ ಓದಿ: ಅಂಬುಲೆನ್ಸ್‌ಗೆ ದಾರಿ ಬಿಡದೇ ಕಿ.ಮೀಗಟ್ಟಲೇ ಚಾಲನೆ – ಕಾರು ಚಾಲಕ ಅರೆಸ್ಟ್Sign in to your account
Username or Email Address


Password

 Remember Me


