ಹಾವೇರಿ: ಜಿಲ್ಲೆಯಲ್ಲಿ ಮಳೆ ನಿಂತರೂ, ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ವರದಾ ನದಿಯ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಡುತ್ತಿರುವ ಘಟನೆ ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.ಮರದ ಸುತ್ತ ನೀರು ಆವರಿಸಿರುವುದರಿಂದ ಮರದಲ್ಲಿ ಸಿಲುಕಿಕೊಂಡು ಮಂಗಗಳು ಪರದಾಡುತ್ತಿವೆ. ಗ್ರಾಮದ ಬಳಿ ಇರುವ ಮಾವಿನ ಮರದಲ್ಲಿ ವಾನರಸೇನೆ ಬಿಡಾರ ಹೂಡಿದ್ದ ವೇಳೆ ಏಕಾಏಕಿ ವರದಾ ನದಿ ಪ್ರವಾಹ ಉಂಟಾಗಿದೆ.ಮರದ ಸುತ್ತ ನೀರು ಆವರಿಸಿದ್ದರಿಂದ ಮರದಲ್ಲಿ ಸಿಲುಕಿ 10ಕ್ಕೂ ಅಧಿಕ ಮಂಗಗಳು ಪರದಾಡುತ್ತಿವೆ. ನೀರಿನ ಹರಿವು ಹೆಚ್ಚಾಗಿದ್ದರಿಂದ ಮರದ ಬಳಿ ತೆರಳಿ ಮಂಗಗಳಿಗೆ ಹಣ್ಣು ಹಂಪಲು ವಿತರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ದಿಕ್ಕು ತೋಚದೆ ಮರದಲ್ಲಿನ ಮಾವಿನ ಸೊಪ್ಪು ತಿಂದು ಮಂಗಗಳು ಕಾಲ ಕಳೆಯುತ್ತಿವೆ.Sign in to your account
Username or Email Address


Password

 Remember Me


