ಬೆಳಗಾವಿ: ಬೆಳಗಾವಿ-ಗೋವಾ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದು, ದೂಧ್‍ಸಾಗರ್ ಬಳಿ ಮಾರ್ಗಮಧ್ಯೆ ರೈಲು ನಿಂತಿದೆ. ಇದರಿಂದಾಗಿ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ.ಬೆಳಗಾವಿ ಗೋವಾ ಮಾರ್ಗದ ರೈಲ್ವೆ ಮಾರ್ಗದಲ್ಲಿ ಭೂ ಕುಸಿತದಿಂದ ರೈಲ್ವೆ ಸಂಚಾರ ಬಂದ್ ಆಗಿದೆ. ಗೋವಾಕ್ಕೆ ಹೊರಟಿದ್ದ ರೈಲು ದೂಧ್‍ಸಾಗರ್ ಬಳಿ ಬೆಳಗಾವಿಯಿಂದ ಸುಮಾರು 34 ಕಿ.ಮೀ. ದೂರದಲ್ಲಿ ನಿಲುಗಡೆಯಾಗಿದ್ದು, ನೂರಾರು ಪ್ರಯಾಣಿಕರು ರೈಲಿನಲ್ಲಿದ್ದಾರೆ. ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ.ಭಾರೀ ಮಳೆಯಿಂದ ಬೆಳಗಾವಿ-ಗೋವಾ ಮಾರ್ಗದ ರೈಲ್ವೆ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದು, ಗೋವಾಕ್ಕೆ ತೆರಳುತ್ತಿದ್ದ ರೈಲು ಅರ್ಧ ದಾರಿಯಲ್ಲೇ ನಿಲುಗಡೆಯಾಗಿದೆ. ರೈಲಿನಲ್ಲಿ ಸಿಲುಕಿರುವ ನೂರಾರು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಆಹಾರ, ನೀರು ವ್ಯವಸ್ಥೆ ಮಾಡಿದೆ.Sign in to your account
Username or Email Address


Password

 Remember Me


