ಹಾವೇರಿ: ಎರಡು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್‍ಮನ್ ಕೆರೆ ನೀರಿಗೆ ಜಿಗಿದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸರಿ ಪಡಿಸಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದಲ್ಲಿ ನಡೆದಿದೆ.ಮಳೆಯಿಂದಾಗಿ ಸಾತೇನಹಳ್ಳಿ ಮತ್ತು ಮಡ್ಲೂರು ಗ್ರಾಮಕ್ಕೆ ವಿದ್ಯುತ್ ಸಂಪೂರ್ಣ ಕಡಿತಗೊಂಡಿತ್ತು. ಈ ಎರಡು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸಲು ಕೆರೆ ನೀರಿಗೆ ಜಿಗಿದ ಲೈನ್‍ಮನ್ ಮುಖೇಶ್ ಪಾಟೀಲ್, ಟ್ರಾನ್ಸ್‌ಫಾರ್ಮರ್ ಸರಿಪಡಿಸಿದ್ದಾರೆ. ಬಳಿಕ ಎರಡು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಿದ್ದಾರೆ.ನಿರಂತರ ಮಳೆ ಸುರಿದಿದ್ದರಿಂದ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮುಳುಗಡೆ ಆಗಿದ್ದರಿಂದ ಕೆರೆಗೆ ಜಿಗಿದು ಈಜಿ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹತ್ತಿ ಸರಿಪಡಿಸಿದ್ದಾರೆ. ಜೀವದ ಹಂಗು ತೊರೆದು ಎರಡು ಗ್ರಾಮಗಳಿಗೆ ವಿದ್ಯುತ್ ಕಲ್ಪಿಸಿದ ಲೈನ್‍ಮನ್ ಮುಖೇಶ್ ಪಾಟೀಲ್ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


