ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ವಿಶೇಷ ಅಭಿಮಾನಿಯೊಬ್ಬರಿಗೆ ಈಗಾಗಲೇ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಕೊಡುವುದಾಗಿ ಪ್ರಶಾಂತ್ ನೀಲ್ ಅವರು ಹೇಳಿದ್ದಾರೆ.ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಂತ ಮೊದಲ ದಿನವೇ ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ. ಅದಕ್ಕಾಗಿ ಎಷ್ಟೋ ಜನರು ಹರಸಾಹಸ ಮಾಡುತ್ತಾರೆ. ಆದರೆ ಒಬ್ಬ ಅಭಿಮಾನಿಗೆ ತುಂಬ ಸುಲಭವಾಗಿ ಕೆಜಿಎಫ್ 2 ಚಿತ್ರದ ಮೊದಲ ದಿನ ಮೊದಲ ಶೋ ಟಿಕೆಟ್ ಸಿಗಲಿದೆ. ಅದು ಕೂಡ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಕಡೆಯಿಂದ ಎಂಬುದು ಅಚ್ಚರಿಯ ವಿಚಾರವಾಗಿದೆ. ಇದನ್ನೂ ಓದಿ:  ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆHi vaivaswat, thank you for all the love and support.
We will be in touch and tickets for FDFS of #KGFChapter2 on us.Take care !! https://t.co/FZnQlajNe6— Prashanth Neel (@prashanth_neel) July 23, 2021ವೈವಸ್ವತ್ ತಾಂಡುಲ ಎಂಬ ಅಭಿಮಾನಿಗೆ ನಿರ್ದೇಶಕ ಪ್ರಶಾಂತ್ ಅವರು ಈ ಭರವಸೆ ನೀಡಿದ್ದಾರೆ. ಅಕ್ಕಿ ಕಾಳಿನ ಮೇಲೆ ಅಕ್ಷರಗಳನ್ನು ಬರೆಯುವ ಕಲಾವಿದ ವೈವಸ್ವತ್ ತಾಂಡುಲ. ಆ ಮೂಲಕ ಅವರು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ನಲ್ಲಿ ದಾಖಲೆ ಮಾಡಿದ್ದಾರೆ. ಈಗ ಅವರು ಅಕ್ಕಿ ಕಾಳಿನ ಮೇಲೆ ಹೊಂಬಾಳೆ ಮತ್ತು ಕೆಜಿಎಫ್ ಎಂದು ಬರೆದು ಚಿತ್ರತಂಡಕ್ಕೆ ಕಳಿಸಿಕೊಟ್ಟಿದ್ದಾರೆ. ಈ ನಿರ್ಮಾಣ ಸಂಸ್ಥೆಯಿಂದ ಬಂದ ಸಿನಿಮಾಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಒಳಗೊಂಡ ಪತ್ರವನ್ನೂ ಬರೆದಿದ್ದಾರೆ.Touched by this sweet gesture. #HombaleFilms – #KGF rice inscription from our prodigal fan Vaivaswat Tandula.@VKiragandur @TheNameIsYash @prashanth_neel @hombalefilms @HombaleGroup pic.twitter.com/YgG3cVp03h— Hombale Films (@hombalefilms) July 23, 2021ಇದನ್ನು ಕಂಡು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಖುಷಿ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಹಾಯ್ ವೈವಸ್ವತ್ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಸಂಪರ್ಕದಲ್ಲಿ ಇರೋಣ. ನಿಮಗೆ ನಮ್ಮ ಕಡೆಯಿಂದ ಕೆಜಿಎಫ್ ಚಾಪ್ಟರ್ 2 ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್‍ಗಳು ಸಿಗುತ್ತದೆ ಎಂದು ಹೇಳಿದ್ದಾರೆ.ಒಂದಿಲ್ಲೊಂದು ರೀತಿಯಲ್ಲಿ ಸಿನಿಪ್ರಿಯರು ಕೆಜಿಎಫ್ 2 ಬಗ್ಗೆ ತಮಗಿರುವ ನಿರೀಕ್ಷೆಯ ಮಟ್ಟವನ್ನು ತೋರ್ಪಡಿಸುತ್ತಿದ್ದಾರೆ. ಅದಕ್ಕೆ ಈಗೊಂದು ಹೊಸ ಉದಾಹರಣೆ ಸಿಕ್ಕಿದೆ. ಅದನ್ನು ಕಂಡು ನಿರ್ದೇಶಕ ಪ್ರಶಾಂತ್ ನೀಲ್ ಖುಷಿ ಆಗಿದ್ದಾರೆ. ಅಭಿಮಾನಿಗಳು, ಇಡೀ ಚಿತ್ರರಂಗವೇ ಸಿನಿಮಾವನ್ನು ತೆರೆಯ ಮೇಲೆ ನೋಡಲು ಸಿದ್ಧರಾಗಿದ್ದಾರೆ.Vaivaswat Tandula S.VKarnataka, wrote MOST ALPHABETS ON A RICE-GRAIN ‘in 3 minutes & 2 seconds, at Exhibition ground,Karnataka on Feb 4,2017 pic.twitter.com/nDP7xkxhs6— India Book of Records (@indiabookrecord) June 19, 2017Sign in to your account
Username or Email Address


Password

 Remember Me


