ರಾಜ್ಯದ್ಯಾಂತ ವರುಣನ ಆರ್ಭಟ ಜೋರಾಗಿದೆ. ಇಂದು ಹಲವು ಕಡೆ ಭಾರೀ ಮಳೆ ಇರಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿಎಸ್ ಪಾಟೀಲ್ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಭಾಗ, ಮಲೆನಾಡು ,ದಕ್ಷಿಣ ಕನ್ನಡ ಉಡುಪಿ, ಕೊಡಗು ಉತ್ತರ ಕನ್ನಡದಲ್ಲಿ ಪ್ರವಾಹದ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ನಾಳೆಯಿಂದ ಕೊಂಚ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಹಾಗೂ ಬಂಗಾಳ ಉಪಸಾಗರದಲ್ಲಿ ವಾಯುಬಾರ ಕುಸಿತದ ಕಾರಣದಿಂದಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಆಗಸ್ಟ್‍ನಲ್ಲಿ ಕೂಡ ಇದೇ ರೀತಿ ಪ್ರವಾಹ ಬರುವ ಸಾಧ್ಯತೆ ಇದೆ ಎಂದಿದ್ದಾರೆ.ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-20
ಮಂಗಳೂರು: 27-24
ಶಿವಮೊಗ್ಗ: 27-21
ಬೆಳಗಾವಿ: 25-21
ಮೈಸೂರು: 28-21ಮಂಡ್ಯ: 29-21
ರಾಮನಗರ: 29-21
ಮಡಿಕೇರಿ: 21-17
ಹಾಸನ: 25-19
ಚಾಮರಾಜನಗರ: 28-21ಚಿಕ್ಕಬಳ್ಳಾಪುರ: 27-19
ಕೋಲಾರ: 29-21
ತುಮಕೂರು: 28-21
ಉಡುಪಿ: 28-25
ಕಾರವಾರ: 28-25
ಚಿಕ್ಕಮಗಳೂರು: 24-19
ದಾವಣಗೆರೆ: 28-22
ಚಿತ್ರದುರ್ಗ: 28-21
ಹಾವೇರಿ: 28-22
ಗದಗ: 28-22
ಕೊಪ್ಪಳ: 30-23
ರಾಯಚೂರು: 32-23
ಯಾದಗಿರಿ: 31-24ವಿಜಯಪುರ: 28-20
ಬೀದರ್: 28-22
ಕಲಬುರಗಿ: 31-23
ಬಾಗಲಕೋಟೆ: 30-23






 Advertisement 




Sign in to your account
Username or Email Address


Password

 Remember Me


