ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪನವರು ಒಂದೊತ್ತಿನ ಊಟಕ್ಕೂ ಕಷ್ಟಪಟ್ಟಂತಹ ವ್ಯಕ್ತಿ ಎಂದು ಆ ದಿನಗಳನ್ನು ನೆನೆದು ಯಡಿಯೂರಪ್ಪ ಅವರ ಬಾಲ್ಯ ಸ್ನೇಹಿತ ರಾಮಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ.ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಸ್ವಾಮಿ, ಯಡಿಯೂರಪ್ಪನವರ ಬಾಲ್ಯ ಜೀವನವನ್ನು ನೆನೆದು ಕಣ್ಣೀರು ಹಾಕಿದರು. ಯಡಿಯೂರಪ್ಪ ಅವರು ಒಂದೊತ್ತಿನ ಊಟಕ್ಕೂ ಕಷ್ಟಪಟ್ಟಂತಹ ವ್ಯಕ್ತಿ. ಅವರ ತಂದೆಯ ಕಾಲದಿಂದಲೂ ಸಹ ಸಾಕಷ್ಟು ಕಷ್ಟಗಳನ್ನು ಉಂಡು ಬೆಳೆದವರು. ಪ್ರತಿದಿನ ಸಂತೆಗೆ ಹೋಗಿ ಕೆಲಸ ಮಾಡಿ ನಂತರ ಶಾಲೆಗೆ ಬರುತ್ತಿದ್ದರು ಎಂದು ಬಿಎಸ್‍ವೈ ಅವರ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಬಿಜೆಪಿಯಲ್ಲಿ ವಿಪ್ಲವ, ಬಿಎಸ್‍ವೈ ನಿರ್ಗಮನ- ರಾಜೀನಾಮೆ ಜಪಿಸಿದ ಯಡಿಯೂರಪ್ಪಇಂತಹ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದು ನಮಗೆ ಖುಷಿ ತಂದಿದೆ. ಇದೀಗ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಸಾಕಷ್ಟು ಜನ ಓಡಾಡುತ್ತಿರುವುದು ಬೇಸರ ತಂದಿದೆ. ಎಂತೆಥವರೋ ಮುಖ್ಯಮಂತ್ರಿ ಆಗಬೇಕು ಎಂದು ಓಡಾಡುತ್ತಿದ್ದಾರೆ. ಹೀಗಿರುವಾಗ ಸಾಧನೆ ಮಾಡಿದ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕು ಎನ್ನುವುದು ತಪ್ಪು. ಯಡಿಯೂರಪ್ಪ ಅವರೇ ಮುಂದಿನ ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಬೇಕೆಂದು ರಾಮಸ್ವಾಮಿ ಅವರು ಅಭಿಪ್ರಾಯಪಟ್ಟರು.






 Advertisement 




Sign in to your account
Username or Email Address


Password

 Remember Me


