ಹಾಸನ: ಮಜ್ಜಿಗೆ ಕಡೆಯುವಾಗ ವಿದ್ಯುತ್ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ.ಶರತ್ (25) ಮೃತ ದುರ್ದೈವಿಯಾಗಿದ್ದಾನೆ. ಮಜ್ಜಿಗೆ ಕಡೆಯುವಾಗ ವಿದ್ಯುತ್ ಶಾಕ್ ಹೊಡೆದು ಯುವಕ ಪ್ರಾಣ ಬಿಟ್ಟಿದ್ದಾನೆ. ಶರತ್ ಆಲೂರು ತಾಲೂಕಿನ ಜಿ ಬೆಳ್ಳೂರು ಗ್ರಾಮದ ಉಮೇಶ್ ಎಂಬುವರ ಮಗನಾಗಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬರೋರಿದ್ರೆ ಅರ್ಜಿ ಹಾಕಲಿ, ಆಮೇಲೆ ಕೂತು ಮಾತನಾಡೋಣ: ಡಿಕೆಶಿಶರತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಇಲ್ಲದ ಕಾರಣ ಅರೇಹಳ್ಳಿ ಬಳಿಯ ದೊಡ್ಡ ಸಾಲಾವರದ ತನ್ನ ದೊಡ್ಡಮ್ಮನವರ ಮನೆಗೆ ಬಂದಿದ್ದ. ಎಂದಿನಂತೆ ಮಜ್ಜಿಗೆ ಕಡಿಯುತ್ತಿದ್ದಂತ ಸಂದರ್ಭದಲ್ಲಿ, ಮಜ್ಜಿಗೆ ಮಿಕ್ಸಿಗೆ ಇರುವ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮಂಗಳೂರಿನ ವಿನಂತಿ ಹರಿಕಾಂತ






 Advertisement 




Sign in to your account
Username or Email Address


Password

 Remember Me


