ಬೆಂಗಳೂರು: ಕೊರೊನಾ ಸೋಂಕಿನ ಭೀತಿಯ ನಡುವೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ಇಂದು ಮುಕ್ತಾಯವಾಗಿದೆ. ಈ ನಡುವೆ ಜುಲೈ 19ರಂದು ನಡೆದ ಮೊದಲ ದಿನದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ವಿವಿಧ ವಿಷಯಗಳ ಕೀ ಉತ್ತರವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಜುಲೈ 19ರಂದು ನಡೆದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಮೊದಲ ಪತ್ರಿಕೆಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿ ಉತ್ತರವನ್ನು  https://sslc.karnataka.gov.in/ ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.ಡೌನ್‍ಲೋಡ್ ಮಾಡೋದು ಹೇಗೆ?
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ https://sslc.karnataka.gov.in/ ವೆಬ್ ಸೈಟ್‍ಗೆ ಭೇಟಿ ನೀಡಬೇಕು. ಈ ವೆಬ್ ಸೈಟ್ ನಲ್ಲಿ ದಾಖಲೆಗಳು ಎಂಬ ಕೆಟಗರಿ ಮೇಲೆ ಕ್ಲಿಕ್ ಮಾಡಿದರೆ, ಎಸ್‍ಎಸ್‍ಎಲ್‍ಸಿ ಎಂಬ ಟ್ಯಾಬ್ ಕಾಣಲಿದೆ. ಅಲ್ಲಿ ಪ್ರಶ್ನೆ ಪತ್ರಿಕೆಗಳ ಮೇಲೆ ಮತ್ತೊಂದು ಪುಟ ತೆರದುಕೊಳ್ಳಲಿದೆ. ಆ ಪುಟದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾದರಿ ಉತ್ತರ ಜುಲೈ-2021 ದಲ್ಲಿ ವಿಷಯವಾರು ಮಾದರಿ ಉತ್ತರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.ಈ ಬಗ್ಗೆ ಗೊಂದಲ ಉಂಟಾದಲ್ಲಿ ವಿದ್ಯಾರ್ಥಿಗಳು ನೇರವಾಗಿ ಪತ್ರಿಕೆ-1ರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು  ಈ ಲಿಂಕ್ ಮೂಲಕ ನೇರವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು.Sign in to your account
Username or Email Address


Password

 Remember Me


