ಬೆಂಗಳೂರು: ರಾಜ್ಯದಲ್ಲಿಂದು 1,653 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 31 ಮಂದಿ ಸಾವನ್ನಪ್ಪಿದ್ದಾರೆ. 2,572 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಸದ್ಯ ರಾಜ್ಯದಲ್ಲಿ 24,695 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.17 ಮತ್ತು ಮರಣ ಪ್ರಮಾಣ ಶೇ.1.87ರಷ್ಟಿದೆ. ರಾಜ್ಯದಲ್ಲಿ ಇದುವರೆಗೆ 28,89,994 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 36,293 ಜನರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 1,40,343 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.ಬೆಂಗಳೂರಿನಲ್ಲಿಂದು 418 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 3 ಜನರು ಸಾವನ್ನಪ್ಪಿದ್ದಾರೆ. 8,748 ಸಕ್ರಿಯ ಪ್ರಕರಣಗಳಿದ್ದು, 1,162 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಬೆಂಗಳೂರಿನಲ್ಲಿ ಒಟ್ಟು 12,23,644 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಬೀದರ್ ಹಾಗೂ ಯಾದಗಿರಿಯಲ್ಲಿ ಇಂದು ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.ಯಾವ ಜಿಲ್ಲೆಯಲ್ಲಿ ಎಷ್ಟು?: 
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 6, ಬೆಳಗಾವಿ 60, ಬೆಂಗಳೂರು ಗ್ರಾಮಾಂತರ 46, ಬೆಂಗಳೂರು ನಗರ 418, ಬೀದರ್ 0, ಚಾಮರಾಜನಗರ 29, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 64, ಚಿತ್ರದುರ್ಗ 21, ದಕ್ಷಿಣ ಕನ್ನಡ 229, ದಾವಣಗೆರೆ 27, ಧಾರವಾಡ 14, ಗದಗ 3, ಹಾಸನ 97, ಹಾವೇರಿ 2, ಕಲಬುರಗಿ 3, ಕೊಡಗು 107, ಕೋಲಾರ 21, ಕೊಪ್ಪಳ 2, ಮಂಡ್ಯ 36, ಮೈಸೂರು 134, ರಾಯಚೂರು 2, ರಾಮನಗರ 3, ಶಿವಮೊಗ್ಗ 87, ತುಮಕೂರು 104, ಉಡುಪಿ 82, ಉತ್ತರ ಕನ್ನಡ 34, ವಿಜಯಪುರ 9, ಯಾದಗಿರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.Sign in to your account
Username or Email Address


Password

 Remember Me


