ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಅಧ್ಯಾತ್ಮಿಕದ ಕಡೆ ವಾಲಿದ್ದಾರೆ.ಓಶೋ ಧ್ಯಾನ ಮಂದಿರಕ್ಕೆ ಸೇರಿಕೊಂಡಿರುವ ಚೈತ್ರಾ ಕೊಟೂರುಗೆ ಅಲ್ಲಿನ ಗುರುಗಳು ಮಾ ಪ್ರಗ್ಯಾ ಭಾರತಿ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಈ ಕುರಿತಂತೆ ಫೋಟೋವೊಂದನ್ನು ಚೈತ್ರಾ ಕೊಟೂರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಚೈತ್ರಾ ಕೊಟೂರುರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಓಶೋ ಧ್ಯಾನ ಮಂದಿರದ ಗುರುಗಳೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ.. ಓಶೋ ಧ್ಯಾನ ಶಿಬಿರ.. ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.  A post shared by Chaithra Kotoor official (@chaithrakotoor_official)ಮಾರ್ಚ್ 28ರಂದು ಮದುವೆ ವಿಚಾರದಲ್ಲಿ ಕಿರಿಕ್ ಆಗಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣಗಳಲಿ ಸಕ್ರಿಯರಾಗಿದ್ದ ಚೈತ್ರಾ ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡು ಪಾಸಿಟಿವ್ ಬರಹಗಳನ್ನು ಬರೆಯುತ್ತಿದ್ದರು. ಇದೀಗ ಬೆಳಗಾವಿಯ ಪಿಂಪಿಲಿಯಲ್ಲಿ ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಕೊಟೂರು ಪ್ರತ್ಯಕ್ಷರಾಗಿದ್ದಾರೆ. ಸದ್ಯ ಆಧ್ಯಾತ್ಮಿಕ ಹಾದಿಯತ್ತ ಸಾಗಿ ಹೊಸ ಜೀವನ ಪ್ರಾರಂಭಿಸುತ್ತಿರುವ ಚೈತ್ರಾ ಕೊಟೂರಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಇದನ್ನೂ ಓದಿ: ಎವರ್‌ಗ್ರೀನ್ ಅನ್ನೋದಕ್ಕೆ ಅನಂತ್‍ನಾಗ್ ಉತ್ತಮ ನಿದರ್ಶನ – ಪದ್ಮ ಪ್ರಶಸ್ತಿ ಅಭಿಯಾನಕ್ಕೆ ಯಶ್ ಬೆಂಬಲ






 Advertisement 




Sign in to your account
Username or Email Address


Password

 Remember Me


