ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.ಇಂದು ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಅವರು ಪೂರ್ಣಾವಧಿ ಸಿಎಂ ಆಗಿ ಇರಬೇಕು. ಎಲ್ಲಾ ಮಠಾಧೀಶರು ಇದನ್ನೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.ರಾಜೀನಾಮೆ ಬಗ್ಗೆ ಬಿಎಸ್‍ವೈ ಏನೂ ಹೇಳಿಲ್ಲ. ಬಿಎಸ್‍ವೈ ಸಿಎಂ ಆಗಿ ಮುಂದುವರಿಯಬೇಕು, ಇದು ಸಂದಿಗ್ಧ ಪರಿಸ್ಥಿತಿ. ಈಗ ಬದಲಾವಣೆ ಆದರೆ ಉತ್ತಮ ಸರ್ಕಾರ ಕೊಡಲು ಸಾಧ್ಯವಿಲ್ಲ. ಎಲ್ಲಾ ಸಿಎಂಗಳಿಗೂ ನಾವು ಬೆಂಬಲ ಕೊಡ್ತೀವಿ ಎಂದರು. ಇದನ್ನೂ ಓದಿ: ಎವರ್‌ಗ್ರೀನ್ ಅನ್ನೋದಕ್ಕೆ ಅನಂತ್‍ನಾಗ್ ಉತ್ತಮ ನಿದರ್ಶನ – ಪದ್ಮ ಪ್ರಶಸ್ತಿ ಅಭಿಯಾನಕ್ಕೆ ಯಶ್ ಬೆಂಬಲಯಡಿಯೂರಪ್ಪ ಮುಂದುವರಿಕೆಯಾಗಬೇಕು. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಶಾಸಕರು ಒಪ್ಪಿದರೆ ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ ಯಡಿಯೂರಪ್ಪ ಅವಧಿ ಪೂರ್ಣ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದರು.Sign in to your account
Username or Email Address


Password

 Remember Me


