ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 1,639 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 2,214 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 36 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಪಾಸಿಟಿವಿಟಿ ರೇಟ್ ಶೇ.1.07ರಷ್ಟಿದೆ. ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.ರಾಜ್ಯದಲ್ಲಿ ಒಟ್ಟು 25,645 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 28,88,341 ಮಂದಿಗೆ ಕೊರೊನಾ ಬಂದಿದೆ. 28,26,411 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಕೋವಿಡ್-19 ಮರಣ ಪ್ರಮಾಣ ಶೇ.2.19ರಷ್ಟಿದೆ. ಇಂದಿನವರೆಗೆ ರಾಜ್ಯದಲ್ಲಿ ಒಟ್ಟು 36,262 ಮಂದಿ ಮರಣ ಹೊಂದಿದ್ದಾರೆ. ಇದನ್ನೂ ಓದಿ: ಜು.26 ರಂದು ಸಿಎಂ ನಿರ್ಗಮನ – ಷರತ್ತು ವಿಧಿಸಿದ ಹೈಕಮಾಂಡ್ಇಂದು ರಾಜ್ಯದಲ್ಲಿ ಒಟ್ಟು 1,52,714 ಸ್ಯಾಂಪಲ್ (ಆರ್‍ಟಿ ಪಿಸಿಆರ್ 30,876 + 1,21,838 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನವರೆಗೆ ಒಟ್ಟು 3,59,101 ಜನರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 419 ಮಂದಿಗೆ ಕೊರೊನಾ ಸೋಂಕು ತಗುಲಿದೆ. 963 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. 7 ಮಂದಿ ಸಾವನ್ನಪ್ಪಿದ್ದಾರೆ.ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 14, ಬೆಳಗಾವಿ 61, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 419, ಚಾಮರಾಜನಗರ 22, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 92, ಚಿತ್ರದುರ್ಗ 29, ದಕ್ಷಿಣ ಕನ್ನಡ 190, ದಾವಣಗೆರೆ 13, ಧಾರವಾಡ 19, ಗದಗ 1, ಹಾಸನ 141, ಹಾವೇರಿ 2, ಕಲಬುರಗಿ 2, ಕೊಡಗು 63, ಕೋಲಾರ 35, ಕೊಪ್ಪಳ 5, ಮಂಡ್ಯ 60, ಮೈಸೂರು 160, ರಾಯಚೂರು 1, ರಾಮನಗರ 5, ಶಿವಮೊಗ್ಗ 37, ತುಮಕೂರು 63, ಉಡುಪಿ 104, ಉತ್ತರ ಕನ್ನಡ 48, ವಿಜಯಪುರದಲ್ಲಿ 10 ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


