ನವದೆಹಲಿ: ತಮಿಳುನಾಡಿಗೆ (Tamil Nadu) 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ (Karnataka) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Manegment Authority) ಸೂಚನೆ ನೀಡಿದೆ.ಮಂಗಳವಾರ ಸಭೆ ನಡೆಸಿದ ಪ್ರಾಧಿಕಾರ, ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ಹರಿಸಲು ನಿರ್ದೇಶನ ನೀಡಿದೆ. ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯೂ 2.5 ಟಿಎಂಸಿ ನೀರು ಹರಿಸಲು ಶಿಫಾರಸು ಮಾಡಿತ್ತು. ಇದನ್ನೂ ಓದಿ: ಮುಂಗಾರು ಪೂರ್ವದಲ್ಲೇ ಕಾವೇರಿಗೆ ಜೀವಕಳೆ; KRS ಒಳಹರಿವು ಹೆಚ್ಚಳರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಕೊಡಗಿನ ತ್ರಿವೇಣಿ ಸಂಗಮದಲ್ಲಿ ಮಳೆ ಹೆಚ್ಚಾಗಿದ್ದು, ಕಾವೇರಿ (Cauvery River) ಒಡಲಿಗೆ ಜೀವಕಳೆ ಬಂದಿದೆ. ಪರಿಣಾಮ ಕೆಆರ್‌ಎಸ್ (KRS) ಒಳ ಹರಿವು ಹೆಚ್ಚಾಗಿದೆ. ಕಳೆದೊಂದು ವಾರದಲ್ಲಿ 1 ಟಿಎಂಸಿಯಷ್ಟು ನೀರು ಕನ್ನಂಬಾಡಿ ಕಟ್ಟೆ ಸೇರಿದೆ.ನೀರಿನ ಬವಣೆಯಿಂದ ಬೆಂದಿದ್ದ ರಾಜ್ಯಕ್ಕೆ ಮಳೆ ಕೊಂಚ ನಿರಾಳ ಮೂಡಿಸಿದೆ. ಈ ಹೊತ್ತಿನಲ್ಲೇ ತಮಿಳುನಾಡಿಗೆ ನೀರು ಹರಿಸುವಂತೆ ಪ್ರಾಧಿಕಾರ ಸೂಚಿಸಿದೆ. ಇದನ್ನೂ ಓದಿ: ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್Sign in to your account
Username or Email Address


Password

 Remember Me


