ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ- 2 ರಲ್ಲಿ ಒಟ್ಟಾರೆ ಫಲಿತಾಂಶ 35.25% ಬಂದಿದೆ.ಏಪ್ರಿಲ್ 29 ರಿಂದ ಮೇ 16ರವರೆಗೆ ಪರೀಕ್ಷೆಗಳು ನಡೆದಿತ್ತು. ಇಲಾಖೆ ವೆಬ್ ಸೈಟ್ http://karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಪರೀಕ್ಷೆಗೆ ಒಟ್ಟು 1,48,942 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 52,505 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬಾಲಕರು 26,496 (31.31%) ಮತ್ತು 26009 ( 40.44%) ಬಾಲಕಿಯರು ಪಾಸ್ ಆಗಿದ್ದಾರೆ.ಸಂಯೋಜನೆವಾರು ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ 11589 (22.24%) ವಾಣಿಜ್ಯ ವಿಭಾಗದಲ್ಲಿ 8709 (22.06%) ಮತ್ತು ವಿಜ್ಞಾನ ವಿಭಾಗದಲ್ಲಿ- 32207 (56.16%) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆ-2 ಬರೆದ ವಿದ್ಯಾರ್ಥಿಗಳಲ್ಲಿ ಫಲಿತಾಂಶ ಸುಧಾರಣೆ ಬಯಸಿದ 32940 ವಿದ್ಯಾರ್ಥಿಗಳು ಇದ್ದಾರೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಕೆ ಕೊನೆ ದಿನ ಮೇ 23, ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆ ಕೊನೆ ದಿನ ಮೇ 25 ಆಗಿದೆ.ಇದನ್ನೂ ಓದಿ: ಎಮಿರೇಟ್ಸ್ ವಿಮಾನಕ್ಕೆ‌ ಸಿಲುಕಿ 40 ರಾಜಹಂಸ ಹಕ್ಕಿಗಳು ಸಾವುಪರೀಕ್ಷೆ-3ಗೆ ವೇಳಾಪಟ್ಟಿ ಪ್ರಕಟ: ಪರೀಕ್ಷೆ-3ಗೆ ಪರೀಕ್ಷಾ ಶುಲ್ಕ ಪಾವತಿ ದಿನಾಂಕ ಕೊನೆ ದಿನ ದಂಡ ರಹಿತ ಮೇ 23 ರಿಂದ ಮೇ 28 ಹಾಗೂ ದಂಡ ಸಹಿತ ಮೇ 29 ರಿಂದ ಮೇ 30 ಆಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ 3ಗೆ ವೇಳಾಪಟ್ಟಿ ಪ್ರಕಟ ಮಾಡಿದ್ದು, ಜೂನ್ 26 ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ -1 ರಲ್ಲಿ 5,52,690 ವಿದ್ಯಾರ್ಥಿಗಳು ಪಾಸ್ ಆಗಿ 81.15% ಫಲಿತಾಂಶ ಬಂದಿತ್ತು.Sign in to your account
Username or Email Address


Password

 Remember Me


