ಬೆಂಗಳೂರು: ಪ್ರಿಯತಮೆಯನ್ನು ಟ್ಯಾಂಕ್‌ ಮೇಲೆ ಕೂರಿಸಿಕೊಂಡು ಕಿಸ್‌ ಮಾಡುತ್ತಲೇ ಬೈಕ್‌ (Bike) ಓಡಿಸಿದ ಪ್‌ರಕರಣಗಳನ್ನು ಈ ಹಿಂದೆ ಓದಿದ್ದೀರಿ. ಇದೀಗ ಯುವಕನೊಬ್ಬ ಯುವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಜಾಲಿ ರೈಡ್‌ ಹೋದ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.ಈ ಗಟನೆ ಬೆಂಗಳೂರಿನ ಯಲಹಂಕದ ಏರ್ ಪೋರ್ಟ್ ರಸ್ತೆಯ (Airport Road) ಯಲಹಂಕ ಫ್ಲೈ‌ ಓವರ್ ಮೇಲೆ ನಡೆದಿದೆ ಎನ್ನಲಾಗಿದೆ. ಇದರ ವೀಡಿಯೋವನ್ನು ವಾಹನ ಸವಾರರೊಬ್ಬರು ವೀಡಿಯೋ ಮಾಡಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.ಮೇ 17 ರಂದು ರಾತ್ರಿ‌ ಯುವಕ ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದಾನೆ. ಅಲ್ಲದೇ ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಡೆಡ್ಲಿ ಬೈಕ್ ರೈಡ್ ಮಾಡಿದ್ದಾನೆ. ಇದನ್ನೂ ಓದಿ: ಪೆನ್‌ಡ್ರೈವ್‌ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡಈ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಇನ್ನೂ ಇಬ್ಬರ‌ ಮೇಲೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


