ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಈ ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಚಿತ್ರದುರ್ಗದಲ್ಲಿ 115 ಮಿ.ಮೀನಿಂದ 204 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಮೇ 18 ರಿಂದ 20ರ ವರೆಗೆ ಬೆಂಗಳೂರಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಬೆಂಗಳೂರಿಗೆ ಆರೆಂಜ್ ಅಲರ್ಟ್ ಜಾರಿ ಮಾಡಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದ್ದು ಅದರಲ್ಲೂ ಮೈಸೂರು, ಮಂಡ್ಯ, ಕೋಲಾರದಲ್ಲೂ ಭಾರೀ ಮಳೆ ಎಚ್ಚರಿಕೆಯನ್ನು ನೀಡಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 28-22
ಮಂಗಳೂರು: 31-26
ಶಿವಮೊಗ್ಗ: 32-23
ಬೆಳಗಾವಿ: 33-23
ಮೈಸೂರು: 30-22ಮಂಡ್ಯ: 31-23
ಮಡಿಕೇರಿ: 24-19
ರಾಮನಗರ: 31-23
ಹಾಸನ: 28-21
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 29-22ಕೋಲಾರ: 29-22
ತುಮಕೂರು: 30-22
ಉಡುಪಿ: 32-26
ಕಾರವಾರ: 32-27
ಚಿಕ್ಕಮಗಳೂರು: 27-20
ದಾವಣಗೆರೆ: 32-24ಹುಬ್ಬಳ್ಳಿ: 32-24
ಚಿತ್ರದುರ್ಗ: 31-23
ಹಾವೇರಿ: 32-24
ಬಳ್ಳಾರಿ: 33-26
ಗದಗ: 32-24
ಕೊಪ್ಪಳ: 33-25ರಾಯಚೂರು: 34-26
ಯಾದಗಿರಿ: 36-27
ವಿಜಯಪುರ: 37-26
ಬೀದರ್: 33-25
ಕಲಬುರಗಿ: 35-26
ಬಾಗಲಕೋಟೆ: 37-26Sign in to your account
Username or Email Address


Password

 Remember Me


