ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ (Rain) ಮಳೆಯಾಗುತ್ತಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಳೆ ಹೆಚ್ಚಾಗಲಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ವಿಚಾರಣೆಗೆ ಪ್ರಜ್ವಲ್‌ ಗೈರು – ಭಾರತಕ್ಕೆ ಕರೆ ತರೋದು ಹೇಗೆ? ಎಸ್‌ಐಟಿ ಮುಂದಿರುವ ಆಯ್ಕೆ ಏನು?ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಇಂದು ಮುಂಜಾನೆಯಿಂದ ಮೋಡ ಕವಿದಿದ್ದು ವಾತಾವರಣ (Weather) ತಂಪಾಗಿದೆ. ನಗರದಲ್ಲಿಯೂ ಸಹ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ. ಮಳೆ ಜೊತೆಗೆ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ, ಗುಡುಗು ಮಿಂಚು ಇರಲಿದೆ. ಸಾರ್ವಜನಿಕರು ಗಾಳಿ ಮಳೆಯ ವೇಳೆ ಮರದ ಕೆಳಗೆ, ಇನ್ನಿತರೆ ಅಸುರಕ್ಷಿತ ಜಾಗಗಳಲ್ಲಿ ಇರದಂತೆ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ಭವಾನಿ ರೇವಣ್ಣ ವಿರುದ್ಧ ಎಚ್ಚರಿಕೆಯ ಹೆಜ್ಜೆ ಇಡಿ – ಎಸ್‍ಐಟಿಗೆ ಸರ್ಕಾರ ಸೂಚನೆ


 Advertisement 







 Advertisement 




Sign in to your account
Username or Email Address


Password

 Remember Me


