– ಮಾವು ಮೇಳದಲ್ಲಿ ಗಮನ ಸೆಳೆದ ಮಾವು
– ಪ್ರದರ್ಶನಕ್ಕೆ ಇಡಲಾಗಿದೆ ಮೀಯಾಝಾಕಿ ಮಾವುಧಾರವಾಡ: ಮಾವಿಗೆ (Mango) ಹಣ್ಣುಗಳ ರಾಜ ಎಂದು ಸುಮ್ಮನೇ ಕರೆಯಲ್ಲ. ಧಾರವಾಡದಲ್ಲಿ (Dharawada) ನಡೆಯುತ್ತಿರುವ ಮಾವು ಮೇಳದಲ್ಲಿ, ವಿಶ್ವದಲ್ಲಿಯೇ ಅತಿ ದುಬಾರಿಯಾದ ಮಾವಿನ ಹಣ್ಣು ಬಂದಿದೆ. ಧಾರವಾಡ ಮಾವಿನ ಮೇಳದಲ್ಲಿ ಪ್ರತಿ ಕಿಲೋ ಗೆ 2.7 ಲಕ್ಷ ರೂ. ಮೌಲ್ಯದ ಮಾವು ಎಲ್ಲರ ಗಮನ ಸೆಳೆದಿದೆ.ವಿಶ್ವದ ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾದ ಮೀಯಾಝಾಕಿ (Miyazaki Mango) ತಳಿಯ ಮಾವನ್ನು ಪ್ರದರ್ಶನಕ್ಕಿಡಲಾಗಿದೆ. ಧಾರವಾಡ ನಗರದ ಪ್ರಮೋದ ಗಾಂವ್ಕರ್ ಎಂಬವರು ತಮ್ಮ ಕಲಕೇರಿ ಗ್ರಾಮದ ತೋಟದಲ್ಲಿ ಈ ಮಾವನ್ನು ಬೆಳೆದಿದ್ದಾರೆ.ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಾವಿನ ಮೇಳದಲ್ಲಿ ಜಪಾನ್ ಮೂಲದ ಈ ವಿಶೇಷ ಮಾವಿನ ತಳಿ ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿ ಕೆಜಿಗೆ ಮೀಯಾಝಾಕಿ ಹಣ್ಣಿಗೆ ಮಾರು 2.7 ಲಕ್ಷ ರೂಪಾಯಿ ಬೆಲೆ ಇದೆ. ಕೇವಲ ಒಂದೇ ಒಂದು ಹಣ್ಣು ಸುಮಾರು 10 ಸಾವಿರ ರೂ. ಬೆಲೆಬಾಳುತ್ತದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌ಮೀಯಾಝಾಕಿ ತಳಿ ಮೂಲತಃ ಜಪಾನಿನ (Japan) ತಳಿಯಾಗಿದೆ. ಅದರ ವಿಶಿಷ್ಟ ಸುವಾಸನೆ ಮತ್ತು ಪೌಷ್ಟಿಕತೆಗೆ ಇದು ವಿದೇಶಗಳಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಇದು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಜಪಾನಿನ ಮೀಯಾಝಾಕಿ ಎಂಬುವವರು ಇದನ್ನ ಮೊದಲು ಬೆಳೆದಿದ್ದಕ್ಕೆ ಈ ಮಾವಿಗೆ ಅವರ ಹೆಸರನ್ನು ಇಡಲಾಗಿದೆ.ಧಾರವಾಡದ ಪ್ರಮೋದ್ ಗಾಂವ್ಕರ್ ಅವರು ಈ ಮಾವಿನ ಸಸಿಯನ್ನ 2012 ರಲ್ಲಿ ತಮ್ಮ ತೋಟದಲ್ಲಿ ನೆಟ್ಟಿದ್ದರು. 2015 ರಿಂದ ಇಳುವರಿ ಆರಂಭವಾಗಿದ್ದು ಕಳೆದ ವರ್ಷ ಎರಡು ಮಾವಿನ ಮರಗಳಲ್ಲಿ ಕೇವಲ 15 ಮಾವು ಆಗಿದ್ದವು. ಈ ವರ್ಷ 4 ಮಾವು ಮಾತ್ರ ಆಗಿದೆ.ಇಳುವರಿ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ. ಮುಂದೆ ರೈತರು ಈ ಮಾವು ಬೆಳೆದು ಇಳುವರಿ ಹೆಚ್ಚಾದರೆ ಬೆಲೆ ಕೂಡಾ ಕಡಿಮೆಯಾಗಲಿದೆ‌ ಎಂದು ತೋಟದ ಮಾಲಿಕ ಪ್ರಮೋದ್‌ ಗಾಂವ್ಕರ್ ಹೇಳುತ್ತಾರೆ.Sign in to your account
Username or Email Address


Password

 Remember Me


