ಬೆಂಗಳೂರು: 25 ವರ್ಷದ ಆಫ್ರಿಕಾದ (Africa) ಮಹಿಳೆಗೆ (Woman) ಹೃದಯದ (Heart) ನಾಲ್ಕು ಕವಾಟಗಳಲ್ಲಿ ಎರಡು ಕವಾಟಗಳ ಬ್ಲಾಕೇಜ್‌ ಆಗಿದ್ದ ಕಾರಣ, ಏಕಕಾಲದಲ್ಲಿಯೇ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯಾಕ್ ಸೈನ್ಸ್‌ನ ಅಧ್ಯಕ್ಷರಾದ ಡಾ ವಿವೇಕ್ ಜವಳಿ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಬಗ್ಗೆ ಮಾತನಾಡಿದ ಡಾ. ವಿವೇಕ್‌, 25 ವರ್ಷದ ಆಫ್ರಿಕನ್ ಮಹಿಳೆಯು ಸುಮಾರು 15 ವರ್ಷಗಳಿಂದ ತನ್ನ ಎರಡು ಹೃದಯ ಕವಾಟಗಳಲ್ಲಿ ಸಂಕೀರ್ಣತೆ ಮತ್ತು ತೀವ್ರವಾದ ಸಂಧಿವಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ರೋಗಿಯು ಇದನ್ನು ನಿರ್ಲಕ್ಷಿಸಿದ್ದ ಕಾರಣ ತೀವ್ರವಾದ ಮಹಾಪಧಮನಿಯ ಸೋರಿಕೆ ಉಂಟಾಗಿ, ಮಾರಣಾಂತಿಕ ಸ್ಥಿತಿ ತಲುಪಿದ್ದರು. ಇದರಿಂದ ಹೃದಯ ಕವಾಟಗಳ ಬ್ಲಾಕೇಜ್‌ ಹಾಗೂ ಹೃದಯ ಸ್ನಾಯುಗಳಲ್ಲಿ ದೌರ್ಬಲ್ಯಕ್ಕೆ ಕಾರಣವಾಗಿತ್ತು. ಈ ತೀವ್ರತೆಯಿಂದ ಇವರ ಸಾವು ಸಂಭವಿಸುವ ಸಾಧ್ಯತೆಯೂ ಹೆಚ್ಚಿತ್ತು. ಅಷ್ಟೇ ಅಲ್ಲದೇ ಕಾಲಿನ ಸೋಂಕು, ಹಲವು ಬಾರಿ ಗರ್ಭಪಾತದಂತಹ ಸಮಸ್ಯೆಗೂ ಒಳಗಾಗಿದ್ದರು ಎಂದು ತಿಳಿಸಿದ್ದಾರೆ.ಆಫ್ರಿಕಾ ಹಾಗೂ ಸುತ್ತಮುತ್ತದ ದೇಶದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ಅವರು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಹೃದಯ ಸಂಪೂರ್ಣ ತಪಾಸಣೆಯಲ್ಲಿ ಹೃದಯ ನಾಲ್ಕು ಕವಾಟಗಳಲ್ಲಿ ಮಹಾಪಧಮನಿಯ ಕವಾಟ ಮತ್ತು ಮಿಟ್ರಲ್ ಕವಾಟವನ್ನು ಬದಲಾಯಿಸಿದ್ದೇವೆ. ಅವರ ಎಡ ಹೃತ್ಕರ್ಣವನ್ನು (ಹೃದಯದ ಮೇಲಿನ ಎರಡು ಕೋಣೆಗಳಲ್ಲಿ ಒಂದು) ಚಿಕ್ಕದಾಗಿಸಿ, ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಅವರ ಹೃದಯದ ಒಂದು ಭಾಗವನ್ನು ಮುಚ್ಚಿದೆವು ಮತ್ತು ಅವರ ಅನಿಯಮಿತ ಹೃದಯ ಬಡಿತಗಳನ್ನು ಸರಿಪಡಿಸಲು ಇ-ಮೇಜ್ ಎಂಬ ವಿಧಾನವನ್ನು ಮಾಡಿದೆವು. ಏಕಕಾಲದಲ್ಲಿಯೇ ಅವರಿಗೆ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದೆವು. ಸಾಮಾನ್ಯವಾಗಿ ಒಂದು ಬಾರಿ ಒಂದು ಕವಾಟದ ಬದಲಿ ಶಸ್ತ್ರಚಿಕಿತ್ಸೆ ನಡೆಸಬಹುದು, ಆದರೆ, ಇವರ ಪರಿಸ್ಥಿತಿಯಲ್ಲಿ ಎರಡು ಕವಾಟಗಳ ಬದಲಿ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವಾಗಿತ್ತು, ಆದಾಗಿಯೂ ಅವರಿಗೆ ನಮ್ಮ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ ಎಂದಿದ್ದಾರೆ.ಈ ಎಲ್ಲಾ ಶಸ್ತ್ರಚಿಕಿತ್ಸೆ ಬಳಿಕ ಅವರಿಗೆ ಮೂತ್ರಪಿಂಡದ ಕಾಯಿಲೆ ಇರುವುದು ಸಹ ತಪಾಸಣೆಯಲ್ಲಿ ಬಹಿರಂಗವಾಯಿತು. ಇದಕ್ಕೆ ಡಯಾಲಿಸಿಸ್ ಮತ್ತು ಮೂತ್ರಪಿಂಡದ ಸೋಂಕುಗಳನ್ನು ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡಲಾಯಿತು. ಆಕೆಯ ಚೇತರಿಕೆಗೆ ಮತ್ತಷ್ಟು ನೆರವಾಗಲು ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಮ್ಲಜನಕೀಕರಣ (ECMO) ವನ್ನು ಬಳಸಿದ್ದೇವೆ. ECMO ಅವರ ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ನಿರ್ವಹಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.Sign in to your account
Username or Email Address


Password

 Remember Me


