– ನೇಹಾ ರೀತಿ ಹತ್ಯೆ ಮಾಡುವೆ ಎಂದಿದ್ದ ಹಂತಕಹುಬ್ಬಳ್ಳಿ: ಇಡೀ ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹುಬ್ಬಳ್ಳಿ ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನ್ ಅವರ ಪುತ್ರಿ ನೇಹಾ (Neha Hiremath) ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಯುವತಿಯ (Young Woman)  ಬರ್ಬರ ಕೊಲೆಯಾಗಿದೆ. ಮನೆಯವರ ಮುಂದೆಯೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.ಅಂಜಲಿ ಅಂಬಿಗೇರ (21) ಕೊಲೆಯಾದ ಯುವತಿ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿದ್ದ ಅಂಜಲಿಗೆ ಚಾಕು ಇರಿದು ಕೊಲೆ ಮಾಡಿ ಹಂತಕ ಎಸ್ಕೇಪ್ ಆಗಿದ್ದಾನೆ. ಗಿರೀಶ್ ಅಲಿಯಾಸ್ ವಿಶ್ವ ಈ ಕೃತ್ಯವೆಸಗಿದ್ದು, ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದನ್ನೂ ಓದಿ: ಕೇಸ್‌ ದಾಖಲಾಗುವ ಮೊದಲೇ A2 ಆರೋಪಿಯನ್ನು ಬಂಧಿಸಿದ್ದು ಅನುಮಾನಾಸ್ಪದ – ರೇವಣ್ಣ ಜಾಮೀನು ಆದೇಶದಲ್ಲಿ ಏನಿದೆ?ಕಳೆದ ಮೂರು ತಿಂಗಳ ಹಿಂದೆ ಅಂಜಲಿ ಮನೆಯಿಂದ ಹೋಗಿದ್ದು, ಎಂಟು ದಿನಗಳ ಹಿಂದೆ ಮನೆಗೆ ಬಂದಿದ್ದಳು. ಕೊಲೆಯಾದ ಅಂಜಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಕೊಲೆ ಮಾಡಿದ ವಿಶ್ವ ಮತ್ತು ಅಂಜಲಿ ಸಹಪಾಠಿಗಳಾಗಿದ್ದು, ಉತ್ತಮ ಒಡನಾಟ ಹೊಂದಿದ್ದರು. ತನ್ನ ಜೊತೆ ಸಲುಗೆಯಿಂದ ಇದ್ದ ಅಂಜಲಿಯನ್ನು ವಿಶ್ವ ತಪ್ಪಾಗಿ ಅರ್ಥೈಸಿಕೊಂಡಿದ್ದ. ನನ್ನ ಜೊತೆ ಸುತ್ತಾಡಲು ಬಾ ಎಂದು ಪೀಡಿಸುತ್ತಿದ್ದ. ಇದಕ್ಕೆ ಅಂಜಲಿ ನಿರಾಕರಿಸಿದ್ದಳು. ಕೋಪಗೊಂಡ ಗಿರೀಶ್ ಅಲಿಯಾಸ್ ವಿಶ್ವ ಇಂದು ಬೆಳಗ್ಗಿನ ಜಾವ ಅಂಜಲಿ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: 380ರ ಪೈಕಿ ಈಗಾಗಲೇ ಮೋದಿ 270 ಗೆದ್ದಿದ್ದಾರೆ : ಅಮಿತ್‌ ಶಾ ವಿಶ್ವಾಸಆರೋಪಿ ವಿಶ್ವ ಒಂದು ವಾರದ ಹಿಂದೆಯೇ ಅಂಜಲಿಗೆ ಜೀವ ಬೆದರಿಕೆ ಹಾಕಿದ್ದು, ನನ್ನ ಜೊತೆಗೆ ಬಾರದಿದ್ದರೆ ನೇಹಾ ರೀತಿ ಕೊಲೆ ಮಾಡುವೆ ಎಂದು ವಾರ್ನಿಂಗ್ ಮಾಡಿದ್ದ. ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಅಂಜಲಿ ಕುಟುಂಬಸ್ಥರಿಗೆ ಬೈದು ನಿಮ್ಮದು ಮೂಢನಂಬಿಕೆ ಹಾಗೇನು ಆಗಲ್ಲ ಎಂದು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಸ್‌ ಸೀಟಿಗಾಗಿ ಕಿತ್ತಾಟ – ಚಪ್ಪಲಿಯಿಂದ ಹಲ್ಲೆ, ಬಟ್ಟೆ ಹಿಡಿದು ಎಳೆದಾಡಿದ ಮಹಿಳೆಯರು






 Advertisement 




Sign in to your account
Username or Email Address


Password

 Remember Me


