ಚಿಕ್ಕಮಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಪೆನ್ ಡ್ರೈವ್ ಪುರಾಣ ಹಚ್ಚಹಸಿರಿರುವಾಗಲೇ ಮತ್ತೋರ್ವ ಯುವಕ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋ ಶೇರ್ ಮಾಡಿದ ಪ್ರಕರಣ ಸಂಬಂಧ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಯುವಕನೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.ಕಳಸ ತಾಲೂಕು ಸಂಸೆ ಸಮೀಪದ ಬಸ್ರಿಕಲ್ ಗ್ರಾಮದ ಪ್ರಜ್ವಲ್ ಎಂಬ ಯುವಕನ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್ 67 ಹಾಗೂ 67ಎ ಅಡಿ ಪ್ರಕರಣ ದಾಖಲಾಗಿದೆ. ಯುವಕ ಪ್ರಜ್ವಲ್ ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ ಸ್ಟಾಗ್ರಾಂನಲ್ಲಿ ಯುವತಿಯರ ಅಶ್ಲೀಲ ಫೋಟೋ ಹಾಗೂ ವೀಡಿಯೋಗಳನ್ನ ಶೇರ್ ಮಾಡಿದ್ದನು. ಇದನ್ನೂ ಓದಿ: ಅಪರಾಧ ನಡೆದಿಲ್ಲ ಎಂದರೆ ನಿರೀಕ್ಷಣಾ ಜಾಮೀನು ಅರ್ಜಿ ಏಕೆ ತಿರಸ್ಕಾರವಾಯ್ತು: ಸಿಎಂ ಪ್ರಶ್ನೆಮಹಿಳೆಯರ ಖಾಸಗೀತನ ಹಾಗೂ ಗೌರವಕ್ಕೆ ಧಕ್ಕೆಯಾಗುವಂತಹ ಸಂದೇಶಗಳನ್ನೂ ಹಾಕಿದ್ದ. ಹಾಗಾಗಿ ಕುದುರೆಮುಖ ಪೊಲೀಸರು ಆತನನ್ನ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಪ್ರಜ್ವಲ್ ಅನ್ಯ ಹುಡುಗಿಯರು ಹಾಗೂ ಮಹಿಳೆಯರ ಫೋಟೋ ಹಾಗೂ ವೀಡಿಯೋ ಜೊತೆ ಇತ್ತೀಚೆಗೆ ರಾಜ್ಯ-ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಕಥೆಯಲ್ಲಿನ ಕೆಲ ಫೋಟೋಗಳನ್ನ ಬಳಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಬಗ್ಗೆ ಅಪಪ್ರಚಾರ ಹಾಗೂ ಅಗೌರವ ತರುವಂತಹ ಸಂದೇಶ ಹಾಗೂ ಫೋಟೋ ಹಾಗೂ ವೀಡಿಯೋಗಳನ್ನ ವೈರಲ್ ಮಾಡಿದ್ದರಿಂದ ಕುದುರೆಮುಖ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಜ್ವಲ್‍ನನ್ನ ಬಂಧಿಸಿ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.Sign in to your account
Username or Email Address


Password

 Remember Me


