ಮಂಗಳೂರು: ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಸಿದ್ದ ಅಪ್ರಾಪ್ತನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇನಲ್ಲಿ ನಡೆದಿದೆ. ಮೇ 6ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಖತರ್ನಾಕ್ ಪ್ಲ್ಯಾನ್‌ ಮಾಡಿದ್ದ ಆಸಾಮಿ:
ಮೆಡಿಕಲ್ ಕಾಲೇಜಿಗೆ ರೋಗಿ ನೆಪದಲ್ಲಿ ಬಂದಿದ್ದ ಅಪ್ರಾಪ್ತ, ಬಳಿಕ ಅಲ್ಲೇ ಇದ್ದ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿ ಮೊಬೈಲ್ ಇಟ್ಟಿದ್ದಾನೆ. ಮೊಬೈಲ್ ಇಟ್ಟುಬಂದ ಸ್ವಲ್ಪ ಹೊತ್ತಿನಲ್ಲೇ ಮೊಬೈಲ್ ರಿಂಗ್ ಆಗುವುದು ಕೇಳಿಸಿದೆ. ಇದನ್ನೂ ಓದಿ: ಹಿಂದೆ ಡಿಕೆಶಿ ಟೆಂಟ್‌ನಲ್ಲಿ ಸಿನಿಮಾ ತೋರಿಸುತ್ತಿದ್ದ ಪ್ರವೃತ್ತಿ ಮುಂದುವರಿಸಿದ್ದಾರೆ: ಸಿಪಿವೈ ವಾಗ್ದಾಳಿಕೂಡಲೇ ಟಾಯ್ಲೆಟ್ ಕೊಠಡಿಯೊಳಗೆ ಬಂದ ಭದ್ರತಾ ಸಿಬ್ಬಂದಿ ಹುಡುಕಾಡಿದಾಗ ಮೊಬೈಲ್ ಕಣ್ಣಿಗೆ ಬಿದ್ದಿದೆ. ಸದ್ಯ ಮೊಬೈಲ್‌ನಲ್ಲಿ ಯಾವುದೇ ದೃಶ್ಯ ಸೆರೆಯಾಗಿಲ್ಲ ಎಂದು ತಿಳಿದುಬಂದಿದೆ. ಬಳಿಕ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸದು ಕಾಲೇಜು ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: Stardom: ಕ್ಲೈಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆರ್ಯನ್‌ಗೆ ಸಾಥ್ ಕೊಟ್ಟ ಶಾರುಖ್ ಖಾನ್Sign in to your account
Username or Email Address


Password

 Remember Me


