ಚಿಕ್ಕಮಗಳೂರು: ಮಗುವಿನ ಜನನದ ಬಗ್ಗೆ ಅನುಮಾನಗೊಂಡಿದ್ದ ತಂದೆಯೊಬ್ಬ (Father) 5 ವರ್ಷದ ತನ್ನ ಮಗುವನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆಗೆ ಚಿಕ್ಕಮಗಳೂರು (Chikkamgaluru) ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೇ ಸ್ಟೇಷನ್ ಗ್ರಾಮ ಸಾಕ್ಷಿಯಾಗಿದೆ.ಮಂಜುನಾಥ್ ಏಳು ವರ್ಷಗಳ ಹಿಂದೆ ಮಂಗಳ ಎಂಬುವರನ್ನು ಪ್ರೀತಿಸಿ (Love) ಮದುವೆಯಾಗಿದ್ದನು. ಮದುವೆಯಾದ ತಿಂಗಳ ಬಳಿಕ ಮಂಜುನಾಥ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ಮಂಗಳ ಗರ್ಭಿಣಿಯಾಗಿದ್ದಳು.‌ ಅಂದಿನಿಂದಲೂ ಮಂಜುನಾಥನಿಗೆ ಮಗುವಿನ ಜನನದ ಬಗ್ಗೆ ಅನುಮಾನ ಮೂಡಿತ್ತು.ಕುಡಿತದ ಚಟಕ್ಕೆ ಬಿದ್ದಿದ್ದ ಮಂಜುನಾಥ್ ಪತ್ನಿ ಜೊತೆ ಜಗಳ ಕೂಡ ಆಡುತ್ತಿದ್ದನು. ಸೆ.19 ರಂದು ತಾರೀಖಿನಂದು ಜ್ವರ ಇದ್ದ ಕಾರಣ ಅಂಗನವಾಡಿಗೆ ಹೋಗದೇ ಮಗು ಮನೆಯಲ್ಲೇ ಮಲಗಿತ್ತು. ಇದನ್ನೂ ಓದಿ: ಚಪ್ಪಲಿ ಹಾರ ಸಿದ್ದರಾಮಯ್ಯಗೆ ಹಾಕ್ಬೇಕಾ? ಇನ್ಯಾರಿಗೆ ಹಾಕ್ತಿರಿ? – ಹೆಚ್‌ಡಿಕೆ ನಿಗಿನಿಗಿ ಕೆಂಡಈ ವೇಳೆ ಪತ್ನಿ ಜೊತೆ ಕೆಲಸಕ್ಕೆ ಹೋಗಿದ್ದ ಮಂಜುನಾಥ್ ಮನೆಗೆ ಬಂದಿದ್ದ. ಯಾರೂ ಇಲ್ಲದ್ದನ್ನು ನೋಡಿ ಒಲೆ ಊದುವ ಕೊಳವೆಯಿಂದ ಮಗುವಿನ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಮಗು ಸತ್ತಿರುವುದನ್ನ ಗಮನಿಸಿ ಭಯಗೊಂಡು ಮಗುವಿನ ಕಿವಿಯಲ್ಲಿದ್ದ ಒಡವೆಗಾಗಿ ಯಾರೋ ಅತ್ಯಾಚಾರ (Rape) ಮಾಡಿ ಕೊಲೆ ಮಾಡಿದ್ದಾರೆಂದು ಬಿಂಬಿಸಲು ಮಗುವಿನ ಕಿವಿ ಓಲೆ ಹಾಗೂ ಕಾಲ್ಗೆಜ್ಜೆಯನ್ನ ಬಿಚ್ಚಿಕೊಂಡು ನಾಟಕವಾಡಿದ್ದ. ಇದನ್ನೂ ಓದಿ: ಭಾಷಣದ ವೇಳೆ ಯಡವಟ್ಟು – ಕಾಶ್ಮೀರಿ ಪಂಡಿತರಿಗೆ ಬದಲಾಗಿ ʻಪಾಕ್‌ ಆಕ್ರಮಿತ ಕಾಶ್ಮೀರʼದಿಂದ ಬಂದ ನಿರಾಶ್ರಿತರು ಎಂದ ರಾಗಾ ಸ್ಥಳಕ್ಕೆ ಬಂದ ಪೊಲೀಸರಿಗೆ ಅತ್ಯಾಚಾರದ ಯಾವುದೇ ಲಕ್ಷಣಗಳು ಕಂಡಿರಲಿಲ್ಲ. ಪ್ರಕರಣ ದಾಖಲಿಸಿಕೊಂಡ ಅಜ್ಜಂಪುರ ಪೊಲೀಸರು ತನಿಖೆ ಕೈಗೊಂಡು ಊರಿನ ಹಲವರನ್ನ ಕರೆ ತಂದು ವಿಚಾರಣೆ ಮಾಡಿದ್ದರು.ಅಂತಿಮವಾಗಿ ಗಂಡ-ಹೆಂಡತಿ ಜಗಳ, ಮಗುವಿನ ಜೊತೆ ಅಪ್ಪನ ವರ್ತನೆ, ಮನೆಯಲ್ಲಿ ಹೆಂಡತಿ ಜೊತೆ ಗಂಡನ ಮಾತು ಕೇಳಿದ್ದ ಅಕ್ಕ-ಪಕ್ಕದವರ ಮಾತಿನ ಮೇರೆಗೆ ಮಗುವಿನ ಮಂಜುನಾಥ್‌ನನ್ನ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿದ್ದು ನಾನೇ ಎಂಬ ಸತ್ಯವನ್ನು ಬಾಯಿಬಿಟ್ಟಿದ್ದಾನೆ. Sign in to your account
Username or Email Address


Password

 Remember Me


