ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ (Darshan) ತೀವ್ರ ಬೆನ್ನು ನೋವು ಕಾಡ್ತಿದೆ. ಬೆನ್ನು ನೋವಿನ ಬಳಲಿಕೆಯಿಂದ ಬೆಂಡಾಗಿರುವ ಆರೋಪಿ ದರ್ಶನ್‌ರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ದಸರಾ ಮುಗಿಯೋದ್ರಲ್ಲಿ ಜಾಮೀನು ಆಗತ್ತದೆ, ತಾಯಿ ಚಾಮುಂಡಿಶ್ವೇರಿ ತಾಯಿಯ ಆಶೀರ್ವಾದ ಇದೆ. ಜೈಲು ಆಧಿಕಾರಿಗಳು, ವೈದ್ಯರು ಹೇಳಿದಂತೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಪತಿಗೆ ವಿಜಯಲಕ್ಷ್ಮಿ (Vijaylakshmi) ಮನವಿ ಮಾಡಿದ್ದಾರೆ. ಇದನ್ನೂ ಓದಿ:‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್ಇನ್ನೂ ಮಗನ ವಿಚಾರ ಪ್ರಸ್ತಾಪಿಸಿದ ದರ್ಶನ್‌ಗೆ ನಿಮ್ಮ ಬೆನ್ನು ನೋವಿನ ಸಮಸ್ಯೆ ಬಗ್ಗೆ ಪುತ್ರ ಪದೇ ಪದೇ ಕೇಳ್ತಿದ್ದಾನೆ. ನಾನು ಬರುತ್ತೀನಿ ಅಂತ ಹಠ ಮಾಡ್ತಿದ್ದ, ಆದರೆ ಬಿಸಿಲು ಜಾಸ್ತಿ ಇದೆ ಬೇಡ ಅಂತಾ ಹೇಳಿದೆ. ವಕೀಲರು ಜಾಮೀನು ವಿಚಾರವಾಗಿ ಪಾಸಿಟಿವ್ ಆಗಿದ್ದಾರೆ. ಆದಷ್ಟು ಬೇಗ ಜಾಮೀನು ಸಿಗುತ್ತೆ ಧೈರ್ಯವಾಗಿರಿ ಎಂದು ಹೇಳಿದ್ದಾರೆ ಪತ್ನಿ ವಿಜಯಲಕ್ಷ್ಮಿ.ಬೆನ್ನು ನೋವಿನಿಂದ ಬ್ಯಾಗ್ ಕೆಳಗಿಟ್ಟ ದರ್ಶನ್ಪತ್ನಿ ಜೊತೆ ಸುದೀರ್ಘ ಅರ್ಧ ಗಂಟೆ ಚರ್ಚೆ ಮಾಡಿದ ಬಳಿಕ ಆರೋಪಿ ದರ್ಶನ್ ಹೈ-ಸೆಕ್ಯೂರಿಟಿ ಸೆಲ್‌ಗೆ ಹೋಗುವಾಗ ಪತ್ನಿ ತಂದಿದ್ದ ಎರಡು ಬ್ಯಾಗ್ ಹಿಡಿದು ಹೋದರು. ಆದರೆ ಬೆನ್ನು ನೋವಿನಿಂದ ಬ್ಯಾಗ್ ಕೆಳಗಿಸಿದ ದರ್ಶನ್ ಮುಖ ಮುರಿದ್ದಿದ್ದು ಕಂಡು ಬಂತು. ಹೈ- ಸೆಕ್ಯೂರಿಟಿ ಸೆಲ್ ಮುಂಭಾಗದಲ್ಲಿ ಬ್ಯಾಗ್ ಕೆಳಗಿಟ್ಟು, ಸ್ವಲ್ಪ ಸಮಯದ ನಂತರ ಮತ್ತೆ ಸುಧಾರಿಸಿಕೊಂಡು ಕೈಯಲ್ಲಿ ಬ್ಯಾಗ್ ಹಿಡಿದು ಆರೋಪಿ ದರ್ಶನ್ ಸೆಲ್‌ಗೆ ತೆರಳಿದರು.ಜೈ ಡಿಬಾಸ್ ಎಂದ ಅಭಿಮಾನಿಗಳು, ಮುಗುಳ್ನಕ್ಕ ದರ್ಶನ್ಪತ್ನಿ ಭೇಟಿಗೆ ಸೆಲ್‌ನಿಂದ ದರ್ಶನ್ ಹೊರಬಂದಾಗ ಜೈಲು ಹೊರಭಾಗದಲ್ಲಿ ಸೇರಿದ್ದ ನೂರಾರು ಅಭಿಮಾನಿಗಳು ಜೈ ಡಿಬಾಸ್ ಎಂದು ಕೂಗಿದ್ರು. ಅಭಿಮಾನಿಗಳು ಜೈ ಡಿಬಾಸ್ ಎಂದು ಕೂಗ್ತಿದ್ದಂತೆ ಅಭಿಮಾನಿಗಳ ಕಡೆ ನೋಡಿದ ಆರೋಪಿ ದರ್ಶನ್ ಮುಗುಳ್ನಕ್ಕು ಸಂದರ್ಶಕರ ಕೋಣೆಗೆ ಹೋದರು.ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಬಂದಾಗಿನಿಂದ ಎಂಟನೇ ಬಾರಿಗೆ ಪತ್ನಿ ಜೈಲಿಗೆ ಬಂದಿದ್ದರು. ಪ್ರತಿ ಭಾರಿಯಂತೆ ಇಂದು ಕೂಡ ವಿಜಯಲಕ್ಷ್ಮಿಗೆ ತಂಗಿಯ ಗಂಡ ಸುಶಾಂತ್ ನಾಯ್ಡು ಸಾಥ್ ನೀಡಿದರು. ವಿಜಯಲಕ್ಷ್ಮಿ ಜೊತೆ ಇಂದು  ಅನುಷಾ ಶೆಟ್ಟಿ, ರೋಹಿತ್ ಅವರು ದರ್ಶನ್ ಭೇಟಿಗೆ ಜೈಲಿಗೆ ಬಂದಿದ್ದರು.Sign in to your account
Username or Email Address


Password

 Remember Me


