ಬೆಂಗಳೂರು: ಕರ್ನಾಟಕದ (Karnataka Election) 14 ಜಿಲ್ಲೆಗಳಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದ್ದು ಬೆಳಗ್ಗೆ 9 ಗಂಟೆಯ ವೇಳೆಯ ವೇಳೆ 9.45% ಮತದಾನ ದಾಖಲಾಗಿದೆ.ಶಿವಮೊಗ್ಗದಲ್ಲಿ(Shivamogga) ಅತಿ ಹೆಚ್ಚು 11.39% ಮತದಾನ ನಡೆದರೆ ರಾಯಚೂರಿನಲ್ಲಿ (Raichuru) 8.27% ಮತದಾನ ದಾಖಲಾಗಿದೆ. ಹಲವೆಡೆ ಮತಯಂತ್ರಗಳು ಕೈಕೊಟ್ಟಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಬೇಕಿತ್ತು. ಆದರೆ ಬೀದರ್‌ ನಗರದ ನ್ಯಾಷನಲ್ ಕಾಲೇಜಿನರುವ ಮತಗಟ್ಟೆ ಸಂಖೆ 151 ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದಕ್ಕೆ ಮತದಾರರು ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ‌‌‌.ರಾಯಚೂರಿನ ಸಿಂಧನೂರು ತಾಲೂಕಿನ ಕಲ್ಮಂಗಿ ಮತಗಟ್ಟೆಯಲ್ಲೂ ಮತಯಂತ್ರ ಕೈಕೊಟ್ಟಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಅರ್ಧ ಗಂಟೆ ವಿಳಂಬವಾಗಿದೆ. ಮತದಾನ ಮಾಡಲು ಮತಗಟ್ಟೆ ಕೇಂದ್ರ ಮುಂದೆ ಜನ ಕಾದು ಕುಳಿದ ಪ್ರಸಂಗ ನಡೆಯಿತು.Sign in to your account
Username or Email Address


Password

 Remember Me


