ಚಿಕ್ಕಬಳ್ಳಾಪುರ: ಮಗನಿಗೆ (Son) ಈಜು (Swimming) ಕಲಿಸಲು ಹೋದ ತಂದೆ (Father) ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಕೋನಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಅಂಗಡಿ ಬಾಬು (45) ಮೃತ ತಂದೆ. ಬಾಬು ತನ್ನ ಮಗ ತೇಜುವಿಗೆ ಗ್ರಾಮದ ಕೆ.ನಾರಾಯಣಸ್ವಾಮಿ ಎಂಬವರ ಕೃಷಿ ಹೊಂಡದಲ್ಲಿ ಈಜು ಕಲಿಸಲು ಮುಂದಾಗಿದ್ದರು. ಮಗನಿಗೆ ತರಬೇತಿ ನೀಡಿ ದಡಕ್ಕೆ ತಲುಪಿಸಿದ ತಂದೆ ಮರಳಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದು, ಮತ್ತೆ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆತಂದೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಮಗ ಜೋರಾಗಿ ಕಿರುಚಿದ ಕಾರಣ ಅಕ್ಕಪಕ್ಕದ ಜಮೀನಿನವರು ಬಂದು ಬಾಬುವನ್ನ ರಕ್ಷಣೆ ಮಾಡಲು ಪ್ರಯತ್ನಿಸಿದರಾದರೂ ಪ್ರಯತ್ನ ವಿಫಲವಾಗಿದೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮಾಜಿ ಶಾಸಕ ರೋಡ್‌ಶೋ


 Advertisement 







 Advertisement 




Sign in to your account
Username or Email Address


Password

 Remember Me


