– ಯಾವುದೇ ಪುರಾವೆ ಇಲ್ಲದೆ ಅರೆಸ್ಟ್ ಮಾಡಿದ್ದಾರೆಬೆಂಗಳೂರು: ಇದೊಂದು ರಾಜಕೀಯ ಷಡ್ಯಂತ್ರ. ಯಾವುದೇ ಪುರಾವೆ ಇಲ್ಲದೆ ಅರೆಸ್ಟ್ ಮಾಡಿದ್ದಾರೆ ಎಂದು ಬಂಧಿತ ಹೆಚ್‌.ಡಿ.ರೇವಣ್ಣ (H.D.Revanna) ಗಂಭೀರ ಆರೋಪ ಮಾಡಿದ್ದಾರೆ.ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಹೆಚ್‌.ಡಿ.ರೇವಣ್ಣ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಮಾಧ್ಯಮದವರೊಂದಿಗೆ ಹೆಚ್‌.ಡಿ.ರೇವಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ವೀಡಿಯೋ ವಿಚಾರ ಗೊತ್ತಿದ್ದು ಮೈತ್ರಿ ಟಿಕೆಟ್, ಮೋದಿ ಪ್ರಚಾರ: ಸಿಎಂ ವಾಗ್ದಾಳಿನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದೊಂದು ರಾಜಕೀಯ ಪಿತೂರಿ. ಇಷ್ಟರಲ್ಲೇ ಎಲ್ಲವನ್ನೂ ಹೇಳ್ತೀನಿ. ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ತಿಳಿಸಿದ್ದಾರೆ.ಪುರಾವೆಯಿಲ್ಲದೇ ನನ್ನನ್ನು ಬಂಧಿಸಲಾಗಿದೆ. ದುರುದ್ದೇಶದಿಂದ ಆರೋಪ ಮಾಡಲಾಗಿದೆ. ನನ್ನ ವಿರುದ್ಧದ ಆರೋಪವೆಲ್ಲಾ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?Sign in to your account
Username or Email Address


Password

 Remember Me


