ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (KFD) ಮತ್ತೆ ಉಲ್ಬಣಗೊಂಡಿದೆ. ಇಂದು ಜಿಲ್ಲೆಯ ಸಿದ್ದಾಪುರ (Siddapura) ತಾಲೂಕಿನ ಅರೆಂದೂರಿನಲ್ಲಿ 5 ವರ್ಷದ ಹೆಣ್ಣುಮಗು ಮಂಗನಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯದಿಂದ ಸಾವು ಕಂಡಿದೆ.ಈ ಮೂಲಕ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಒಂಬತ್ತು ಜನ ಸಾವು ಕಂಡಿದ್ದಾರೆ. ಕೆಲವು ದಿನದಿಂದ ಜ್ವರದಿಂದ ನರಳುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹೆಣ್ಣುಮಗು ಅಸುನೀಗಿದೆ. ಇದನ್ನೂ ಓದಿ: ಹೆಚ್‌.ಡಿ.ರೇವಣ್ಣ 4 ದಿನ ಎಸ್‌ಐಟಿ ಕಸ್ಟಡಿಗೆಸಿದ್ದಾಪುರ ತಾಲೂಕಿನೊಂದರಲ್ಲೇ 90 ಮಂಗನಕಾಯಿಲೆ ಪ್ರಕರಣ ಪತ್ತೆಯಾದರೇ ಇತರೆ ತಾಲೂಕುಗಳು ಸೇರಿ ಒಟ್ಟು 99 ಪ್ರಕರಣಗಳು ಈವರೆಗೆ ಪತ್ತೆಯಾಗಿವೆ. ಇದನ್ನೂ ಓದಿ: ಇದೊಂದು ರಾಜಕೀಯ ಷಡ್ಯಂತ್ರ: ಬಂಧನ ಬಳಿಕ ಹೆಚ್‌.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ


 Advertisement 







 Advertisement 




Sign in to your account
Username or Email Address


Password

 Remember Me


