ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಮುಂದುವರಿಯಲಿದೆ. ಇದರೊಂದಿಗೆ ಕೆಲ ಜಿಲ್ಲೆಗಳಲ್ಲಿ ವರುಣನ ಆಗಮನವೂ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಗಳಿಗೆ ಸದ್ಯ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಸೇರಿದಂತೆ ದಕ್ಷಿಣದ ಜಿಲ್ಲೆಗಳ ಕೆಲ ಪ್ರದೇಶಗಳಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನ ಬೆಂಗಳೂರಿಗೆ ಸಾಧಾರಣ ಮಳೆ ಸಾಧ್ಯತೆ ಇದೆ. ಇದೇ ಮೇ 7 ಮತ್ತು ಮೇ 8ರ ಬಳಿಕ ನಗರದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲ ಕಡೆ ಚದುರಿದಂತೆ ಮಳೆಯಾಗಲಿದೆ. ಮೇ 7ರ ನಂತರ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುವ ಮುನ್ಸೂಚನೆಯನ್ನೂ ಹವಾಮಾನ ನೀಡಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 37-23
ಮಂಗಳೂರು: 33-27
ಶಿವಮೊಗ್ಗ: 38-23
ಬೆಳಗಾವಿ: 39-22
ಮೈಸೂರು: 38-23ಮಂಡ್ಯ: 38-23
ಮಡಿಕೇರಿ: 38-23
ರಾಮನಗರ: 38-24
ಹಾಸನ: 37-21
ಚಾಮರಾಜನಗರ: 38-23
ಚಿಕ್ಕಬಳ್ಳಾಪುರ: 38-24ಕೋಲಾರ: 37-24
ತುಮಕೂರು: 38-23
ಉಡುಪಿ: 33-28
ಕಾರವಾರ: 33-27
ಚಿಕ್ಕಮಗಳೂರು: 36-20
ದಾವಣಗೆರೆ: 40-23ಹುಬ್ಬಳ್ಳಿ: 41-23
ಚಿತ್ರದುರ್ಗ: 39-23
ಹಾವೇರಿ: 40-23
ಬಳ್ಳಾರಿ: 43-27
ಗದಗ: 42-24
ಕೊಪ್ಪಳ: 42-26ರಾಯಚೂರು: 44-29
ಯಾದಗಿರಿ: 44-29
ವಿಜಯಪುರ: 42-28
ಬೀದರ್: 42-28
ಕಲಬುರಗಿ: 44-29
ಬಾಗಲಕೋಟೆ: 43-27Sign in to your account
Username or Email Address


Password

 Remember Me


