ಬೆಂಗಳೂರು: ಸಿಡಿಲು (Lightning) ಬಡಿದು ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ ಘಟನೆ ಹೊಸಕೋಟೆ (Hosakote) ತಾಲೂಕಿನ ಗಣಗಲು ಗ್ರಾಮದಲ್ಲಿ ನಡೆದಿದೆ.ಗ್ರಾಮದ ರತ್ಮಮ್ಮ ಸಿಡಿಲಿಗೆ ಬಲಿಯಾದ ಮಹಿಳೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ ದಿಢೀರ್ ಮಳೆ ಆರಂಭವಾಗಿದ್ದು, ಮಹಿಳೆ ಬೇವಿನ ಮರದಡಿ ಮೇಕೆಗಳ ಜೊತೆ ನಿಂತಿದ್ದಾಗ ಸಿಡಿಲು ಬಡಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಮೇಕೆಗಳು ಸಹ ಸಿಡಿಲಿಗೆ ಬಲಿಯಾಗಿವೆ. ಗ್ರಾಮದಲ್ಲಿ ಗಾಳಿ ಮಳೆಯ (Rain) ಆರ್ಭಟ ಜೋರಾಗಿದ್ದು ಮಳೆ ಮುಂದುವರೆದಿದೆ. ಇದನ್ನೂ ಓದಿ: ಮಾಜಿ ಪ್ರೇಯಸಿಯನ್ನು ಮದ್ವೆಯಾಗಿದ್ದಕ್ಕೆ ಸಿಟ್ಟು – ಪಾರ್ಸೆಲ್‍ನಲ್ಲಿ ಬಾಂಬ್ ಕಳುಹಿಸಿ ಹತ್ಯೆಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲೇ ಪತ್ನಿಗೆ ತಲಾಕ್ ನೀಡಿ ಪರಾರಿಯಾದ ಟೆಕ್ಕಿSign in to your account
Username or Email Address


Password

 Remember Me


