ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಮುಂದುವರಿಯಲಿದೆ. ಇದರೊಂದಿಗೆ ಕೆಲ ಜಿಲ್ಲೆಗಳಲ್ಲಿ ವರುಣನ ಆಗಮನವೂ ಆಗಲಿದೆ. ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಸಿಲಿಕಾನ್ ಸಿಟಿಯಲ್ಲಿ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಲಿದೆ. ಜೊತೆಗೆ ಉತ್ತರ ಒಳನಾಡು ಭಾಗದಲ್ಲಿ ಹೀಟ್ ವೇವ್ ಮುಂದುವರಿಯಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಬಿಸಿಲ ಝಳ ಕಡಿಮೆ ಇಲ್ಲ. ಈ ಭಾಗದ ಜಿಲ್ಲೆಗಳಲ್ಲೂ ಈಗಾಗಲೇ ತಾಪಮಾನ 40 ಡಿಗ್ರಿ ದಾಟಿದ್ದು, ಮಲೆನಾಡು ವ್ಯಾಪ್ತಿಯ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾತ್ರ 40 ಡಿಗ್ರಿಗಿಂತ ಕಡಿಮೆ ತಾಪಮಾನ ಇರಲಿದೆ. ಇನ್ನೂ ಸಿಲಿಕಾನ್ ಸಿಟಿಯಲ್ಲೂ ಬಿಸಿಲ ಅಬ್ಬರ ಜಾಸ್ತಿಯಾಗಿದ್ದು, ಒಂದು ಕಡೆ ತಾಪಮಾನ ಏರಿಕೆ ಸಾರ್ವಕಾಲಿಕ ದಾಖಲೆ ಬರೆದಿದ್ದರೆ, ಇದರ ಜೊತೆಗೆ 123 ವರ್ಷಗಳ ಬಳಿಕ ಏಪ್ರಿಲ್ ತಿಂಗಳಿನಲ್ಲಿ ಶೂನ್ಯ ಮಳೆ ದಾಖಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 38-24
ಮಂಗಳೂರು: 33-27
ಶಿವಮೊಗ್ಗ: 39-22
ಬೆಳಗಾವಿ: 39-21
ಮೈಸೂರು: 37-23ಮಂಡ್ಯ: 38-23
ಮಡಿಕೇರಿ: 32-18
ರಾಮನಗರ: 38-24
ಹಾಸನ: 37-20
ಚಾಮರಾಜನಗರ: 37-24
ಚಿಕ್ಕಬಳ್ಳಾಪುರ: 39-24ಕೋಲಾರ: 38-24
ತುಮಕೂರು: 39-23
ಉಡುಪಿ: 33-27
ಕಾರವಾರ: 33-26
ಚಿಕ್ಕಮಗಳೂರು: 36-18
ದಾವಣಗೆರೆ: 41-22ಹುಬ್ಬಳ್ಳಿ: 41-22
ಚಿತ್ರದುರ್ಗ: 39-21
ಹಾವೇರಿ: 41-22
ಬಳ್ಳಾರಿ: 43-27
ಗದಗ: 42-23
ಕೊಪ್ಪಳ: 42-24ರಾಯಚೂರು: 44-28
ಯಾದಗಿರಿ: 44-28
ವಿಜಯಪುರ: 42-27
ಬೀದರ್: 42-26
ಕಲಬುರಗಿ: 44-27
ಬಾಗಲಕೋಟೆ: 42-26Sign in to your account
Username or Email Address


Password

 Remember Me


