ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಮುಂದುವರಿಯಲಿದೆ. ಇದರೊಂದಿಗೆ ಕೆಲ ಜಿಲ್ಲೆಗಳಲ್ಲಿ ವರುಣನ ಆಗಮನವೂ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕಳೆದ ಏಪ್ರಿಲ್ ತಿಂಗಳಿನಲ್ಲಿ ಶೂನ್ಯ ಮಳೆ ದಾಖಲಾಗಿದೆ. ಮುಂದಿನ 3-4 ದಿನಗಳು ಬಿಸಿಲಿನ ಅಬ್ಬರ ಜೋರಾಗಿರಲಿದೆ. ಸಿಲಿಕಾನ್ ಸಿಟಿಯಲ್ಲಿ ಕನಿಷ್ಠ 36 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಲಿದೆ. ಜೊತೆಗೆ ಉತ್ತರ ಒಳನಾಡು ಭಾಗದಲ್ಲಿ ಹೀಟ್ ವೇವ್ ಮುಂದುವರಿಯಲಿದೆ.ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬಳ್ಳಾರಿ, ವಿಜಯನಗರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಉಷ್ಣ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಈ ನಡುವೆ ಮೈಸೂರು, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದರೊಂದಿಗೆ ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಟಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 36-24
ಮಂಗಳೂರು: 34-27
ಶಿವಮೊಗ್ಗ: 38-22
ಬೆಳಗಾವಿ: 38-21
ಮೈಸೂರು: 36-24ಮಂಡ್ಯ: 37-24
ಮಡಿಕೇರಿ: 30-19
ರಾಮನಗರ: 38-24
ಹಾಸನ: 34-21
ಚಾಮರಾಜನಗರ: 36-24
ಚಿಕ್ಕಬಳ್ಳಾಪುರ: 38-24ಕೋಲಾರ: 37-24
ತುಮಕೂರು: 38-24
ಉಡುಪಿ: 34-26
ಕಾರವಾರ: 33-26
ಚಿಕ್ಕಮಗಳೂರು: 34-20
ದಾವಣಗೆರೆ: 40-23ಹುಬ್ಬಳ್ಳಿ: 40-22
ಚಿತ್ರದುರ್ಗ: 39-22
ಹಾವೇರಿ: 40-22
ಬಳ್ಳಾರಿ: 43-26
ಗದಗ: 41-23
ಕೊಪ್ಪಳ: 42-24ರಾಯಚೂರು: 44-28
ಯಾದಗಿರಿ: 44-27
ವಿಜಯಪುರ: 42-26
ಬೀದರ್: 42-25
ಕಲಬುರಗಿ: 44-27
ಬಾಗಲಕೋಟೆ: 42-24Sign in to your account
Username or Email Address


Password

 Remember Me


