ಬಳ್ಳಾರಿ: ಕಲ್ಯಾಣ್ ಜ್ಯುವೆಲರ್ಸ್‍ನಲ್ಲಿ (Jewelery shop) ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಸ್ಫೋಟಗೊಂಡ (AC Blast) ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಬಳ್ಳಾರಿ (Bellary)- ಬೆಂಗಳೂರು ರಸ್ತೆಯಲ್ಲಿರುವ ಮಳಿಗೆಯಲ್ಲಿ ಈ ಅವಘಡ ಸಂಭವಿಸಿದೆ. ಏಕಾಏಕಿ ಎಸಿ ಬ್ಲಾಸ್ಟ್ ಆದ ಪರಿಣಾಮ ಮಳಿಗೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ತೀವ್ರತೆಗೆ ಕಿಟಕಿ ಗಾಜುಗಳು ಒಡೆದು ಹೋಗಿವೆ. ಅಲ್ಲದೇ ಮಳಿಗೆಯಲ್ಲಿ ದಟ್ಟ ಹೊಗೆ ಆವರಿಸಿದೆ. ಇದನ್ನೂ ಓದಿ: ಪ್ರಜ್ವಲ್‌ ಕೇಸ್‌ – ಜಡ್ಜ್‌ ಮುಂದೆ ಸಂತ್ರಸ್ತೆಯಿಂದ ಹೇಳಿಕೆ: ಏನಿದು ಸಿಆರ್​ಸಿಪಿ ಸೆಕ್ಷನ್ 164? ಹೇಳಿಕೆಗೆ ಯಾಕಿಷ್ಟು ಮಹತ್ವ?ಗಾಯಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ಹೊಲದ ಕೆಲಸಕ್ಕೆ ಹೋಗಿದ್ದ ರೈತ ಬಲಿSign in to your account
Username or Email Address


Password

 Remember Me


