ಬೆಂಗಳೂರು: ಮಾಜಿ ಮಂತ್ರಿಗಳ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಯೂ ಟರ್ನ್ ತೆಗೆದುಕೊಂಡಿದ್ದಾರೆ. ದಾಖಲಿಸಿದ್ದ ದೂರನ್ನ ಹಿಂಪಡೆಯಲು ದಿನೇಶ್ ನಿರ್ಧರಿಸಿದ್ದು, ತಮ್ಮ ವಕೀಲರ ಮೂಲಕ ಪತ್ರವನ್ನ ಪೊಲೀಸ್ ಠಾಣೆಗೆ ತಲುಪಿಸಲು ಮುಂದಾಗಿದ್ದಾರೆ ಎಂದು ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.ಮಾರ್ಚ್ 2ರಂದು ಮಾಜಿ ಸಚಿವರ ವಿರುದ್ಧ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಶುಕ್ರವಾರ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ಮಾಜಿ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ದಿನೇಶ್ ಕಲ್ಲಹಳ್ಳಿ, ಇನ್ನೂ ಮೂವರ ವೀಡಿಯೋಗಳು ತಮ್ಮ ಬಳಿಯಲ್ಲಿರುವ ಬಗ್ಗೆ ಹೇಳಿದ್ದರು.ಸದ್ಯದ ತಮ್ಮ ಲೆಟರ್ ಹೆಡ್ ನಲ್ಲಿಯೇ ಪತ್ರ ಬರೆದಿದ್ದಾರೆ. ಪತ್ರವನ್ನ ದಿನೇಶ್ ವಕೀಲರು ಪೊಲೀಸರಿಗೆ ತಲುಪಿಸಲಿದ್ದಾರೆ. ಆದ್ರೆ ದಿಢೀರ್ ಅಂತ ದಿನೇಶ್ ಯೂ ಟರ್ನ್ ಪಡೆದಿದ್ದು ಯಾಕೆ ಅನ್ನೋದರ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ. ಪೊಲೀಸ್ ವಿಚಾರಣೆಗೆ ಹಾಜರಾಗುವ ಮುನ್ನ ತಮಗೆ ಜೀವ ಬೆದರಿಕೆ ಇದೆ ಎಂದು ದಿನೇಶ್ ಹೇಳಿದ್ದರು.Sign in to your account
Username or Email Address


Password

 Remember Me


