ಬೆಂಗಳೂರು: ಬಿಗ್‍ಬಾಸ್ ಸೀಸನ್ ಎಂಟರ ಆವೃತ್ತಿಯ ಮೊದಲ ವೀಕೆಂಡ್ ನಲ್ಲಿ ಒಂಟಿ ಮನೆಯ ಮಂದಿ ತಮ್ಮ ಅನುಭವಗಳನ್ನ ಅಭಿನಯ ಚಕ್ರವರ್ತಿ ಸುದೀಪ್ ಜೊತೆ ಹಂಚಿಕೊಂಡರು. ಮೊದಲ ವಾರ ಯಶಸ್ವಿಯಾಗಿ ಪೂರೈಸಿದ ಸೆಲೆಬ್ರಿಟಿಗಳ ತಮ್ಮಲ್ಲಾದ ಸಣ್ಣ ಪುಟ್ಟ ಗೊಂದಲಗಳನ್ನ ಪೈಲ್ವಾನ ಮುಂದೆ ಹೇಳಿ ಬಗೆಹರಿಸಿಕೊಂಡರು. ಇನ್ನು ಸುದೀಪ್ ಸಹ ಎಂದಿನಂತೆ ಎಲ್ಲರ ಜೊತೆ ಫ್ರೆಂಡ್ಲಿಯಾಗಿ ಮಾತನಾಡುತ್ತಾ ತಮಾಷೆಗೆ ಕೆಲವರ ಕಾಲೆಳೆದು ಟಿವಿ ಮುಂದೆ ಕುಳಿತ ವೀಕ್ಷಕರನ್ನ ನೆಗೆಗಡಿಲಿನಲ್ಲಿ ತೇಲಿಸಿದರು. ಸುದೀಪ್ ಜೊತೆ ಮಾತನಾಡುತ್ತಾ ಕಾಮಿಡಿ ಆ್ಯಕ್ಟರ್ ಪಾವಗಡದ ಮಂಜು, ನಾನು ತಿಳಿದ ನಿಧಿ ಸುಬ್ಬಯ್ಯ ಇವರು ಅಲ್ಲವೇ ಅಲ್ಲ ಎಂದು ಹೇಳಿದರು.ವೀಕೆಂಡ್‍ನಲ್ಲಿ ಸುದೀಪ್ ಮುಂದೆ ಮಂಜು ಹೇಳಿದ ಕಂಪ್ಲೇಂಟ್ ಇದು. ನಿಧಿ ಸುಬ್ಬಯ್ಯ ನಾವ್ ತಿಳ್ಕೊಂಡೆ ಇಲ್ಲ ಸರ್.. ತುಂಬಾನೇ ಕೆಟ್ಟದಾಗಿ ಕೊಳಕಾಗಿ ಬೈತಾರೆ ಸರ್. ಚುಚ್ಚಿ ಬಿಡ್ತೀನಿ, ಸಾಯಿಸಿ ಬಿಡ್ತೀನಿ ಅಂತ ಪಕ್ಕದಲ್ಲಿ ಇರೋರಿಗೂ ಗೊತ್ತಾಗದಂತೆ ಬೈತಾರೆ. ಏನೇನು ಮಾತಾಡ್ತಾರೆ ಅವರು. ನನ್ನ ದುರಾದೃಷ್ಟಕ್ಕೆ ನನಗೊಬ್ಬನಿಗೆ ಕೇಳಿಸುತ್ತೆ. ಯಾರು ಹೇಳಿದ್ರೂ ನಂಬಲ್ಲ ಸರ್ ಅಂತ ಸುದೀಪ್ ಮುಂದೆ ಬಡ ಬಡ ಅಂತ ವರದಿ ಒಪ್ಪಿಸಿದ್ರು ಮಂಜು.ಅರೇ ಇಷ್ಟಕ್ಕೂ ಮಂಜು ಯಾಕೆ ಹೀಗೆ ಹೇಳಿದ್ರೂ ಅಂತ ನೀವು ಯೋಚಿಸ್ತಿದ್ದಾರೆ ಅಲ್ವಾ.. ನಾವ್ ಹೇಳ್ತೀವಿ ನೋಡಿ. ವೀಕೆಂಡ್ ಚರ್ಚೆ ವೇಳೆ ಸುದೀಪ್, ಮನೆಯಲ್ಲಿರೋರ ಪಾಸಿಟಿವ್ ಮತ್ತು ನೆಗೆಟಿವ್ ಗುಣ ಹೇಳುವಂತೆ ಮಂಜುಗೆ ಹೇಳಿದ್ರು. ಮೊದಲು ದಿವ್ಯಾ ಹೆಸರು ಹೇಳಿದಾಗ ಎಲ್ಲರ ಜೊತೆ ಬೆರಿತಾಳೆ ಅಂತ ಅಂದುಕೊಳ್ಳೋ ರೀತಿ ಇರ್ತಾಳೆ. ಆದ್ರೆ ಹಾಗೆ ಇರಲ್ಲ. ದಿವ್ಯಾ ತುಂಬಾ ಕನ್ನಿಂಗ್ ಇರ್ತಾರೆ ಹಾಗಾಗಿ ಅವರ ಹತ್ರ ಹುಷಾರಾಗಿ ಇರಬೇಕು ಅಂತ ಮಂಜು ಹೇಳಿದಾಗ ಇಡೀ ಮನೆಯ ಮಂದಿಯೆಲ್ಲ ನಗೆಗಡಿಲಿನಲ್ಲಿ ತೇಲಾಡಿದ್ರು. ಅದೇ ರೀತಿ ನಿಧಿ ಸುಬ್ಬಯ್ಯ ಹೆಸ್ರು ಹೇಳಿದಾಗಲೂ ಮಂಜು ಫನ್ನಿಯಾಗಿ ಆನ್ಸರ್ ಮಾಡಿ ಎಲ್ಲರನ್ನ ನಗಿಸಿದ್ರು.Sign in to your account
Username or Email Address


Password

 Remember Me


