ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೋಡೆತ್ತುಗಳು ಅಲ್ಲ, ಅವರು ಕಾದಾಟದ ಹೋರಿಗಳು. ಸಿಎಂ ಆಸೆಗಾಗಿ ಬಡಿದಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.ನಗರದಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆಶಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜನರ ದುಡ್ಡಿನಲ್ಲಿ ನಡೆಯುತ್ತಿರುವ ಸದನವನ್ನ ಸರಿಯಾಗಿ ನಡೆಸಲು ಬಿಡುತ್ತಿಲ್ಲವೆಂದು ಕಿಡಿಕಾರಿದರು.ಇದೇ ವೇಳೆ ಮಾಜಿ ಸಚಿವರ ಸಿಡಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದರ ಹಿಂದೆ ಹಲವರ ಕೈವಾಡ ಇದೆ. ಕಾಂಗ್ರೆಸ್ ನಾಯಕರು, ಸಂಘ ಸಂಸ್ಥೆಗಳು ಹಾಗೂ ಬೇರೆ ಯಾರೆಲ್ಲಾ ಇದ್ದಾರೆ ಅನ್ನೋದು ತನಿಖೆಯಿಂದ ಹೊರಬರಬೇಕಾಗಿದೆ ಎಂದು ಹೇಳಿದರು.ಬಿಜೆಪಿ ಸರ್ಕಾರ ಬರಲು ಪಕ್ಷ ತೊರೆದು ಬಂದು ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರ ತೇಜೋವಧೆ ಯತ್ನ ನಡೆಯುತ್ತಿದೆ. ಹೀಗಾಗಿ 6 ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಸಿಡಿ ಅಂದ ಕೂಡಲೇ ರಾಸಲೀಲೆ ಹನಿಟ್ರ್ಯಾಪ್ ಅಷ್ಟೇ ಅಲ್ಲ, ಫೋನ್ ಸಂಭಾಷಣೆ, ದಾಖಲಾತಿ ವಿಚಾರ ಸಹ ಸಿಡಿಯಲ್ಲಿ ಇರಬಹುದು ಎಂದರು.ಸಿಡಿ ಬಹಿರಂಗವಾಗಿ ತೇಜೋವಧೆ ಆದ ನಂತರ ನಾಯಕರ ಗೌರವ ಕಡಿಮೆ ಆಗುತ್ತೆ. ಹೀಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಸಚಿವ ಶ್ರೀರಾಮುಲು ಬಿಜೆಪಿ ಸಚಿವರನ್ನ ಸರ್ಮರ್ಥನೆ ಮಾಡಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


