ದಾವಣಗೆರೆ: ನಿನ್ನ ಪ್ರೀತಿಗಾಗಿ ಹುಡುಗಿ ತಂದೆ, ತಾಯಿಯನ್ನು ಬಿಟ್ಟು ಬಂದಿದ್ದಾಳೆ. ಅವಳನ್ನು ಸುಖವಾಗಿ ನೋಡಿಕೋ, ಏನಮ್ಮಾ ನೀನು ಅಷ್ಟೇ ಪ್ರೀತಿ ಮಾಡಿದ ಮೇಲೆ ಎಲ್ಲಾ ಜಯಿಸಬೇಕು ಎಂದು ನವ ಜೋಡಿಗೆ ಶಾಸಕ ರೇಣುಕಾಚಾರ್ಯ ಕಿವಿ ಮಾತು ಹೇಳಿದ್ದಾರೆ.ಜಿಲ್ಲೆಯ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಘಟನೆ ನಡೆದಿದೆ. ನಿಮ್ಮ ತಂದೆ, ತಾಯಿಯನ್ನು ನೋಡಿಕೊಂಡ ರೀತಿಯಲ್ಲೇ ಹುಡುಗನ್ನು, ಅತ್ತೆ, ಮಾವರನ್ನೂ ನೋಡಿಕೊಳ್ಳಬೇಕು. ನಿಮ್ಮ ತಂದೆ ನನಗೆ ತುಂಬಾ ಸ್ನೇಹಿತ ಬೆಳಗ್ಗೆ ಕಣ್ಣೀರು ಹಾಕುತ್ತಿದ್ದ. ಯಾವ ವಿಷಯಕ್ಕೆ ಎಂದು ಕೇಳು ಆಗಿರಲಿಲ್ಲ, ಜನ ಜಾಸ್ತಿ ಇದ್ದರು. ಇಬ್ಬರೂ ಹುಡುಗಿಯ ತಂದೆಯ ಮನೆಗೆ ಹೋಗಿ ಅವರ ಕಾಲಿಗೆ ಬಿದ್ದು, ಆಶೀರ್ವಾದ ಪಡೆಯಬೇಕು. ನಾನು ಫೋನ್ ಮಾಡಿ ಹೇಳುತ್ತೇನೆ ಮನೆಗೆ ಹೋಗಿ ಎಂದರು.ಧೈರ್ಯವಾಗಿರು ಏನೂ ಆಗುವುದಿಲ್ಲ. ಪ್ರೀತಿ ಮಾಡಿದ ಮೇಲೆ ಎಲ್ಲವನ್ನೂ ಜಯಿಸಬೇಕು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾರೆ. ಅಲ್ಲದೆ ಇದೇ ವೇಳೆ ಇಬ್ಬರಿಗೂ ಬುದ್ಧಿ ಹೇಳಿದ್ದಾರೆ.ಬಳಿಕ ಹುಡುಗಿಯ ತಂದೆಗೆ ಕರೆ ಮಾಡಿ ಮಾತನಾಡಿದ್ದು, ನಿನ್ನ ಮಗಳು, ಅಳಿಯ ಇಬ್ಬರೂ ವಿವಾಹವಾಗಿದ್ದಾರೆ, ಮಠದಲ್ಲಿದ್ದಾರೆ. ಇಬ್ಬರನ್ನೂ ನಿಮ್ಮ ಮನೆಗೆ ತೆರಳಲು ಹೇಳಿದ್ದೇನೆ. ಅವರಿಬ್ಬರಿಗೂ ಆಶೀರ್ವಾದ ಮಾಡು ಎಂದು ಕೇಳಿಕೊಂಡಿದ್ದಾರೆ.Sign in to your account
Username or Email Address


Password

 Remember Me


