ಕೋಲಾರ: ಪ್ರೀತಿಸಿದ ಯುವತಿ ಮೊಬೈಲ್ ಕರೆ ಸ್ವೀಕರಿಸಲಿಲ್ಲ ಎಂದು ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.ಕೋಲಾರ ತಾಲೂಕಿನ ಶಿವಾರಪಟ್ಟಣ ಗ್ರಾಮದ ಸಮೀಪ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊರಟಿ ಗ್ರಾಮದ ಮನೋಜ್ ಕುಮಾರ್ (34) ಆತ್ಮಹತ್ಯೆಗೆ ಶರಣಾದ ಯುವಕ.ಯುವಕ ಶಿವಾರಪಟ್ಟಣ ಗ್ರಾಮದ ಸಮೀಪದ ಕೆಸಿ ವ್ಯಾಲಿ ಯೋಜನೆಯಡಿ ಸ್ಥಾಪಿಸಿರುವ ಪಂಪ್‍ಹೌಸ್‍ನಲ್ಲಿ ಒಂದು ವರ್ಷದಿಂದ ಜಲಗಾರನಾಗಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಕೆಲಸಕ್ಕೆ ಆಗಮಿಸಿದ ಮನೋಜ್ ಕುಮಾರ್ ತಾನು ಪ್ರೀತಿಸುತ್ತಿದ್ದ ಯುವತಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದಾನೆ. ಆಕೆ ಕರೆ ಸ್ವೀಕರಿಸಿಲ್ಲ. ಇದರಿಂದ ಬೇಸರಗೊಂಡು ಪಂಪ್‍ಹೌಸ್‍ನ ಕಟ್ಟಡದ ಸಮೀಪ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಮಾಲೂರು ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


