ಬೆಂಗಳೂರು: ಬಿಗ್ ಮನೆಯಲ್ಲಿ ರಂಗು ರಂಗಿನ ಆಟ ಮುಂದುವರೆದಿದೆ. ವಾರಾಂತ್ಯದಲ್ಲೊಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಈ ವಿಚಾರವಾಗಿ ರಘು ಮತ್ತು ಧನುಶ್ರೀ ಮಾತನಾಡಿದ್ದಾರೆ. ಮನೆಯ ರಂಗು ರಂಗಿನ ಆಟದ ಬಿಸಿ ಹೆಚ್ಚಾಗುತ್ತಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ಯಾರು ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಮನೆಯಲ್ಲಿ ಕೆಲವು ದಿನ ಮಾತ್ರ ಇದ್ದು ಹೋಗಬೇಕಾ..? ಹೊಂದಿಕೊಂಡು ಬೆರೆಯಲು ನನಗೆ ಸಮಯ ಬೇಕು ಅಷ್ಟರಲ್ಲಿ ಹೋಗಬೇಕಾ ಎಂದು ನೋವಾಗುತ್ತಿದೆ ಎಂದು ಧನುಶ್ರೀ ರಘು ಜೊತೆ ಹೇಳಿಕೊಂಡಿದ್ದಾರೆ.ಭಯಾ ಆಗುತ್ತಿದೆಯಾ.. ಎರಡನೇ ವಾರದ ಕ್ಯಾಪ್ಟನ್ ಆಯ್ಕೆ ಸಂದರ್ಭದಲ್ಲಿ ಕೊನೆಗೆ ನಿರ್ಮಲಾ ಎಸ್ ಎಂದ ಟೀಮ್‍ಗೆ ಯಾರನ್ನೋ ಮೆಚ್ಚಿಸಲು ಹೋಗಿಬಿಟ್ಟರು. ಇವರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಅವರಿಂದ ತಾನು ಈ ಮನೆಯಲ್ಲಿ ಉಳಿಯಬಹುದು ಎಂದು ಹೀಗೆ ಮಾಡಿದ್ದಾರೆ ಅನ್ನಿಸುತ್ತದೆ ಅಂತ ಇಬ್ಬರೂ ಗುಟ್ಟಾಗಿ ಚರ್ಚೆ ನಡೆಸಿದ್ದಾರೆ.ವಾರಾಂತ್ಯದಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ನಾನು ಉಳಿಯಬೇಕು ಎನ್ನುವ ಮನಸ್ಥಿತಿ ಇದೆ. ಆದರೆ ಯಾರು ಅದನ್ನು ಬಾಯಿಬಿಟ್ಟು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಇವರೆಲ್ಲ ಕೀ ಕೊಟ್ಟ ಗೊಂಬೆಗಳಂತೆ. ಬಿಗ್ ಬಾಸ್ ಹೇಳಿದಂತೆ ಆಟವಾಡುವ ಗೊಂಬೆಗಳು ಮಾತ್ರ ಇವರು ಎನ್ನುವುದು ಅಷ್ಟೆ ಸತ್ಯವಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ವಾರಾಂತ್ಯದಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ. ಯಾರು ಸೇಫ್ ಆಗಿ ಉಳಿದು ತಮ್ಮ ಆಟ ಮುಂದುವರಿಸ್ತಾರೆ ಎಂದು ಕಾದುನೋಡಬೇಕಿದೆ.Sign in to your account
Username or Email Address


Password

 Remember Me


