ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಮಯ ಸಿಕ್ಕಾಗಲೆಲ್ಲ ತಮ್ಮ ಮುದ್ದಿನ ಮಕ್ಕಳೊಂದಿಗೆ, ಕುಟುಂಬದೊಂದಿಗೆ ಕಾಲ ಕಳೆಯುವುದು ತಿಳಿದೇ ಇದೆ. ಅದೇ ರೀತಿ ಇದೀಗ ಮಗ ಯಥರ್ವ್‍ನೊಂದಿಗೆ ಆಟವಾಡಿದ್ದಾರೆ.ಈ ವೀಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಶ್, ಅಪಾಪೀನ್… ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಯಶ್ ಕೆನ್ನೆಗಳನ್ನು ಉಬ್ಬಿಸಿಕೊಂಡರೆ, ಯಥರ್ವ್ ಅಪ್ಪನ ಕೆನ್ನೆಗೆ ಬಾರಿಸಿದ್ದಾನೆ. ಹೀಗೆ ಆಟವಾಡಿರುವ 46 ಸೆಕೆಂಡ್‍ನ ವೀಡಿಯೋವನ್ನು ಹಾಕಿದ್ದಾರೆ. ಇದರಲ್ಲಿ ಜೂನಿಯರ್ ಯಶ್ ಸೊಗಸಾಗಿ ಮಾತನಾಡಿದ್ದು, ಕ್ಯೂಟ್ ಆಗಿ ಆ್ಯಕ್ಷನ್ ಸಹ ಮಾಡಿದ್ದಾನೆ.ಏರೋಪ್ಲೇನ್ ಸೌಂಡ್ ತೋರಿಸಿದ್ದು, ಅಪಪೀ ಎಂದು ಸೌಂಡ್ ಮಾಡಿದ್ದು, ಬಳಿಕ ಸೂಯ್……..ಎಂದು ಹೇಳಿದ್ದಾನೆ. ಆಗ ಯಶ್ ಓ ಏರೋಪ್ಲೇನ್, ಓಕೆ ಮಗನೆ ಎಂದು ಮುತ್ತು ನೀಡಿದ್ದಾರೆ. ಹೀಗೆ ಮಗನ ಕೈಲಿ ಕೆನ್ನೆಗೆ ಬಾರಿಸಿಕೊಂಡು ರಾಕಿ ಭಾಯ್ ಸಂತಸಪಟ್ಟಿದ್ದಾರೆ. ತಂದೆ ಮಗ ಇಬ್ಬರೂ ನಕ್ಕು ಸಖತ್ ಎಂಜಾಯ್ ಮಾಡಿದ್ದಾರೆ.  A post shared by Yash (@thenameisyash)ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದು, ಜುಲೈ 16ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಕ್ಷಣಕ್ಕಾಗಿ ರಾಕಿ ಭಾಯ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲುಗಿನ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬರೋಬ್ಬರಿ 65 ಕೋಟಿ ರೂ.ಗೆ ಕೆಜಿಎಫ್-2 ಸಿನಿಮಾ ಬಿಡುಗಡೆ ರೈಟ್ಸ್ ನನ್ನು ತಮ್ಮದಾಗಿಸಿಕೊಂಡಿದ್ದಾರೆ.ನಿರ್ಮಾಪಕ ವಿಜಯ್ ಕಿರಂಗದೂರು 70 ಕೋಟಿ ರೂ. ಬೇಡಿಕೆ ಇಟ್ಟಿದ್ದನ್ನು ನೋಡಿ ಹಲವು ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದರು. ಟಾಲಿವುಡ್‍ನ ಖ್ಯಾತ ನಿರ್ಮಾಪಕ ದಿಲ್ ರಾಜು, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಎರಡು ತೆಲುಗು ರಾಜ್ಯಗಳಲ್ಲೂ ಕೆಜಿಎಫ್-2 ಸಿನಿಮಾ ಬಿಡುಗಡೆಯ ಹಕ್ಕನ್ನು 65 ಕೋಟಿ ರೂ.ಗೆ ಮಾತನಾಡಿ ಖರೀದಿಸುವ ಮೂಲಕ ಎಲ್ಲಾ ನಿರ್ಮಾಪಕರು ಗಪ್-ಚುಪ್‍ಗೊಳ್ಳುವಂತೆ ಮಾಡಿದ್ದಾರೆ.Sign in to your account
Username or Email Address


Password

 Remember Me


